ಚಿಕ್ಕಮಗಳೂರು: ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವನ್ನಪ್ಪಿರುವ ಮನಕಲಕುವ ಘಟನೆ ಚಿಕ್ಕಮಗಳೂರು ತಾಲೂಕಿನ ಗಾಳಿಗಳ್ಳಿಯಲ್ಲಿ ನಡೆದಿದೆ.
ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಸಾವು ದೊಡ್ಡ ರಾಜಣ್ಣ (80) ಮತ್ತು ಪತ್ನಿ ರುದ್ರಮ್ಮ (74) ಮೃತ ದುರ್ದೈವಿಗಳಾಗಿದ್ದು, ಕಳೆದ ಒಂದು ವಾರದ ಹಿಂದೆ ರುದ್ರಮ್ಮಗೆ ಸ್ಟ್ರೋಕ್ ಆಗಿತ್ತು. ಜೊತೆಗೆ ಎರಡು ವರ್ಷದಿಂದ ಅನಾರೋಗ್ಯದಿಂದ ರಾಜಣ್ಣ ಬಳಲುತ್ತಿದ್ದರು.
ಓದಿ: ನಾಳೆ ಬಿಜೆಪಿ ರೈತ ಮೋರ್ಚಾ ಕಾರ್ಯಕಾರಿಣಿ ಸಭೆ: ಕೃಷಿ ಉತ್ಪನ್ನ ಸಂಘಗಳ ರಚನೆ ಕುರಿತು ಚರ್ಚೆ
ನಿನ್ನೆ ಆಸ್ಪತ್ರೆಗೆ ಕರೆ ತಂದಾಗ ರಾಜಣ್ಣ ಸಾವನ್ನಪ್ಪಿದ್ದು, ಗಂಡನ ಸಾವಿನ ಸುದ್ದಿ ಕೇಳಿ ಮೃತದೇಹ ಮನೆಗೆ ಬರುವಷ್ಟರಲ್ಲಿ ಹೆಂಡತಿಯೂ ಸಾವನ್ನಪ್ಪಿದ್ದಾರೆ. ಇಬ್ಬರನ್ನು ಒಟ್ಟಿಗೇ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಘಟನೆ ನೋಡಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.