ಚಿಕ್ಕಮಗಳೂರು:ರಾಮನ ಹೆಸರಲ್ಲಿ ರಾವಣ ರಾಜ್ಯ ಮಾಡಲು ಹೊರಟಿದ್ದಾರೆ. ನಿಮ್ಮಂಥವರಿಂದ ನಾನು ಕಲಿಯಬೇಕಿಲ್ಲ, ನನಗೆ ಜನರ ಬದುಕು ಬೇಕು ಎಂದು ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಕತ್ತಿ ಕಟ್ಕೊಂಡು ರಾಜಕಾರಣ ಮಾಡುವುದಲ್ಲ. ಕತ್ತಿ ಹಿಡ್ಕೊಂಡು ರಾಮನ ಹೆಸರು ಉಳಿಸೋದಲ್ಲ. ರಾಮ ಏನ್ ಸಂದೇಶ ಕೊಟ್ಟಿದ್ದಾನೆ, ಮೊದಲು ಮಾನವೀಯತೆ ಕಲಿಯಿರಿ. ಮುಖ್ಯ ಮಂತ್ರಿಗಳಿಗೆ ನಾಡಿನ ಬಗ್ಗೆ ಗೌರವ ಇದ್ದರೆ ಎಲ್ಲಾ ಧರ್ಮದ ಸ್ವಾಮೀಜಿಗಳ ಸಭೆ ಕರೆಯಲಿ. ಅವರ ಸಮುಖದಲ್ಲಿ ಭಾವೈಕ್ಯತೆ ಸಂದೇಶವನ್ನು ಜನತೆಗೆ ಕೊಡುವ ಕೆಲಸ ಮಾಡಲಿ ಎಂದರು.