ಕರ್ನಾಟಕ

karnataka

ETV Bharat / state

ರಂಭಾಪುರಿ ಶ್ರೀಗಳಿಂದ 136 ಆಟೋಚಾಲಕರಿಗೆ ದಿನಸಿ ಕಿಟ್​ ವಿತರಣೆ

ಜನರು ಮೊದಲಿನಂತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಮತ್ತು ಆರ್ಥಿಕವಾಗಿ ಸದೃಢಗೊಳ್ಳುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಸಂಕಷ್ಟ ಕಾಲದಲ್ಲಿ ಎಂತಹ ಕಠಿಣ ಪ್ರಸಂಗ ಬಂದರೂ ಯಾರೂ ಕೂಡ ಎದೆಗುಂದದೆ ಅಮೂಲ್ಯ ಜೀವ ಸಂರಕ್ಷಣೆ, ಕೌಟುಂಬಿಕ ಶಾಂತಿ ಕಾಪಾಡಿಕೊಳ್ಳಿ..

By

Published : Jun 5, 2021, 2:28 PM IST

ರಂಭಾಪುರಿ ಶ್ರೀಗಳಿಂದ 136 ಆಟೋ ಚಾಲಕರಿಗೆ ದಿನಸಿ ಕಿಟ್​ ವಿತರಣೆ
ರಂಭಾಪುರಿ ಶ್ರೀಗಳಿಂದ 136 ಆಟೋ ಚಾಲಕರಿಗೆ ದಿನಸಿ ಕಿಟ್​ ವಿತರಣೆ

ಚಿಕ್ಕಮಗಳೂರು :ಚಿಕ್ಕಮಗಳೂರು ಜಿಲ್ಲೆಯ ಎನ್​ಆರ್‌ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ 136 ಆಟೋಚಾಲಕರಿಗೆ ಜಗದ್ಗುರು ರಂಭಾಪುರಿ ಶ್ರೀ ವೀರಸೋಮೇಶ್ವರ ಸ್ವಾಮೀಜಿ ದಿನಸಿ ಕಿಟ್ ವಿತರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲೆಡೆ ಕೊರೊನಾ ವ್ಯಾಪಿಸಿದ ಪರಿಣಾಮ ಇಡೀ ಜಗತ್ತಿನ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಜನತೆ ಧೈರ್ಯ ಕಳೆದುಕೊಳ್ಳದೆ ಸಮ ಚಿತ್ತದಿಂದ,ದಿಟ್ಟತನದಿಂದ ಎಲ್ಲವನ್ನೂ ಎದುರಿಸಬೇಕು ಎಂದರು.

ರಂಭಾಪುರಿ ಶ್ರೀಗಳಿಂದ 136 ಆಟೋಚಾಲಕರಿಗೆ ದಿನಸಿ ಕಿಟ್​ ವಿತರಣೆ..

ದುಡಿಯುವಂತಹ ಕೈಗಳಿಗೆ ಕೆಲಸವಿಲ್ಲ. ಎಲ್ಲಾ ಕಡೆಗಳಲ್ಲೂ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆ. ಸರ್ಕಾರ ಎಷ್ಟೇ ಸಹಾಯ ಮಾಡಿದರೂ ಅದು ಎಲ್ಲರಿಗೂ ತಲುಪಲು ಸಾಧ್ಯವಾಗುತ್ತಿಲ್ಲ. ಭಗವಂತನ ಕರುಣೆಯಿಂದ ಕೊರೊನಾ ಸೋಂಕು ಆದಷ್ಟು ಬೇಗ ನಿರ್ಮೂಲನೆಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಜನರು ಮೊದಲಿನಂತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಮತ್ತು ಆರ್ಥಿಕವಾಗಿ ಸದೃಢಗೊಳ್ಳುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಸಂಕಷ್ಟ ಕಾಲದಲ್ಲಿ ಎಂತಹ ಕಠಿಣ ಪ್ರಸಂಗ ಬಂದರೂ ಯಾರೂ ಕೂಡ ಎದೆಗುಂದದೆ ಅಮೂಲ್ಯ ಜೀವ ಸಂರಕ್ಷಣೆ, ಕೌಟುಂಬಿಕ ಶಾಂತಿ ಕಾಪಾಡಿಕೊಳ್ಳಿ.

ನಗರದ ಆಟೋಚಾಲಕರು ಕಳೆದ 30 ವರ್ಷದಿಂದ ಪೀಠಕ್ಕೆ ಬರುವ ಯಾತ್ರಿಕರು ಹಾಗೂ ಸಾರ್ವಜನಿಕರೊಂದಿಗೆ ಸೌಹಾರ್ದಯುತರಾಗಿ, ಸಾಮರಸ್ಯದಿಂದ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

For All Latest Updates

TAGGED:

ABOUT THE AUTHOR

...view details