ಚಿಕ್ಕಮಗಳೂರು: ಚಂದನವನದಲ್ಲಿ ಡ್ರಗ್ ಮಾಫಿಯಾ ಕುರಿತಂತೆ ಜಿಲ್ಲೆಯಲ್ಲಿ ಸಚಿವ ಸಿ. ಟಿ. ರವಿ ಹೇಳಿಕೆ ನೀಡಿದ್ದಾರೆ.
ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯದೆ ಡ್ರಗ್ ಮಾಫಿಯಾ ಹತ್ತಿಕ್ಕಲಿದೆ: ಸಚಿವ ಸಿ. ಟಿ. ರವಿ ಡ್ರಗ್ ಮಾಫಿಯಾ ಇವತ್ತು, ನಿನ್ನೆಯದ್ದಲ್ಲ. ಇದರ ನಿಯಂತ್ರಣಕ್ಕೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಕೂಡ ಬೇರು ಸಮೇತ ಕಿತ್ತುಹಾಕಲು ಸಾಧ್ಯವಾಗಿಲ್ಲ. ಆದರೆ, ಸದ್ಯ ಸರ್ಕಾರ ಮಾಫಿಯಾವನ್ನ ಗಂಭೀರವಾಗಿ ಪರಿಗಣಿಸಿದೆ. ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ.
ಈಗಾಗಲೇ 84 ಕ್ಕೂ ಹೆಚ್ಚು ಜನರ ವಿಚಾರಣೆ ನಡೆಯುತ್ತಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಾಗಿಲ್ಲ. ಈ ಜಾಲ ಹೊರ ರಾಜ್ಯ, ಹೊರ ದೇಶಗಳನ್ನೂ ಸುತ್ತಿವರೆದಿದೆ. ಇದರಲ್ಲಿ ಕೆಲವೆಡೆ ಭಯೋತ್ಪಾದಕರು ತಳುಕು ಹಾಕಿಕೊಂಡಿದ್ದರೆ ಇನ್ನೂ ಕೆಲವೆಡೆ ರಾಜಕಾರಣಿಗಳು, ಸಿನಿಮಾ ನಟ-ನಟಿಯರನ್ನು ತಳುಕು ಹಾಕಿಕೊಂಡಿದ್ದಾರೆ.
ಇನ್ನೂ ಡ್ರಗ್ ಮಾಫಿಯಾದಲ್ಲಿ ಯಾರೇ ಇದ್ರು ಸರಿಯೇ, ಅವರ ಗಂಭೀರ ತನಿಖೆಯಾಗ್ತಿದೆ. ಯುವ ಜನರನ್ನ ಈ ಪಿಡುಗಿನಿಂದ ಮುಕ್ತಗೊಳಿಸಬೇಕೆಂಬ ಜವಾಬ್ದಾರಿ ಸರ್ಕಾರದ ಮೇಲಿದೆ. ತನಿಖೆ ತಂಡದ ಮೇಲೆ ಒತ್ತಡ ತರುವಂತಹ ಕೆಲಸ ನಡೆಯುತ್ತಿದೆ. ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದರು.