ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಮಲೆಯ ಮಾರುತದಲ್ಲಿರುವ ಕಟ್ಟಡಕ್ಕೆ ಬೇಕಿದೆ ಅಭಿವೃದ್ಧಿ ಕಾರ್ಯ - ಮಲೆಯಮಾರುತದಲ್ಲಿರುವ ಕಟ್ಟಡಕ್ಕೆ ಬೇಕಿದೆ ಅಭಿವೃದ್ಧಿ ಕಾರ್ಯ

ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿರುವ ಮಲಯ ಮಾರುತದ ಸೌಂದರ್ಯ ವರ್ಣಿಸುವುದು ಅಸಾಧ್ಯ. ಆದರೆ, ಪ್ರವಾಸಿಗರಿಗೆಂದು ನಿರ್ಮಾಣ ಮಾಡಿರುವ ಪ್ರವಾಸಿ ಮಂದಿರ ಹಾಳಾಗಿದ್ದು, ಅದನ್ನು ಸರಿಪಡಿಸುವತ್ತಾ ಸರ್ಕಾರ ಗಮನ ಹರಿಸಬೇಕಾಗಿದೆ.

ಮಲೆಯಮಾರುತದಲ್ಲಿರುವ ಕಟ್ಟಡಕ್ಕೆ ಬೇಕಿದೆ ಅಭಿವೃದ್ಧಿ ಕಾರ್ಯ
Govt has to make development work in Maleya Maruta building

By

Published : Jan 29, 2021, 1:44 PM IST

ಚಿಕ್ಕಮಗಳೂರು: ಮಲೆನಾಡು ಒಂತರಾ ವಿಸ್ಮಯ. ಮೂರು ಕಾಲದಲ್ಲೂ ತನ್ನದೇ ಆದ ಮೋಹಕ ಚೆಲುವು ಹೊರ ಸೂಸುತ್ತದೆ. ಇದಕ್ಕೆ ಮಲೆನಾಡಿನ ಗಡಿ ಭಾಗದಲ್ಲಿನ ಚಾರ್ಮಾಡಿ ಘಾಟಿಯಲ್ಲಿರುವ ಮಲಯಮಾರುತ ಉತ್ತಮ ನಿರ್ದಶನವಾಗಿದೆ. ಇದೀಗ ತನ್ನ ನೈಜ ಸೊಬಗಿನಿಂದ ಕಂಗೊಳಿಸುತ್ತಿದೆ.

ಮಲೆಯಮಾರುತದಲ್ಲಿರುವ ಕಟ್ಟಡಕ್ಕೆ ಬೇಕಿದೆ ಅಭಿವೃದ್ಧಿ ಕಾರ್ಯ

ಜಿಲ್ಲೆಯ ಚಾರ್ಮಾಡಿ ಘಾಟಿಯಲ್ಲಿರುವ ಮಲಯ ಮಾರುತದ ಸೌಂದರ್ಯವನ್ನು ವರ್ಣಿಸುವುದು ಅಸಾಧ್ಯ. ಸುತ್ತಲೂ ಹಚ್ಚಹಸಿರಿನ ಗಿರಿಗಳ ಸಾಲು, ತಿರುವು ಮುರುವಾದ ರಸ್ತೆಗಳು, ಗಗನ ಚುಂಬಿಸುವಷ್ಟು ಎತ್ತರಕ್ಕೆ ಬೆಳೆದು ನಿಂತ ಬೆಟ್ಟಗಳ ಸಾಲು, ಬೆಟ್ಟಗಳ ಮೇಲಿಂದ ತೇಲಿ ಹೋಗುವ ಮಂಜಿನ ಸಾಲು, ಪಕ್ಕದಲ್ಲೇ ಜುಳು ಜುಳು ಹರಿಯುವ ಜಲಧಾರೆಗಳು, ಹಕ್ಕಿಗಳ ಚಿಲಿಪಿಲಿ ಕಲರವ, ಹತ್ತು ಹಲವು ವೈಶಿಷ್ಟ್ಯತೆಗಳು ಕಾಣ ಸಿಗುತ್ತವೆ.

ಚಾರ್ಮಾಡಿ ಘಾಟಿ

ಓದಿ: ನೂತನ ಉಪ ಸಭಾಪತಿಯಾಗಿ ಬಿಜೆಪಿಯ ಪ್ರಾಣೇಶ್ ಆಯ್ಕೆ

ಇದರ ನಿಸರ್ಗ ಸೌಂದರ್ಯಕ್ಕೆ ಮನಸೋತು ನಿತ್ಯ ಇಲ್ಲಿಗೆ ಬೆಂಗಳೂರು, ಮಂಗಳೂರು, ಮೈಸೂರು ಮುಂತಾದ ಕಡೆಗಳಿಂದ ಇಲ್ಲಿಗೆ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದರು. ಪ್ರವಾಸಿಗರ ಅನುಕೂಲಕ್ಕಾಗಿ ಮೂಡಿಗೆರೆ ಅರಣ್ಯ ಇಲಾಖೆಯಿಂದ ಕಳೆದ 25 ವರ್ಷಗಳ ಹಿಂದೆ ಮಲಯ ಮಾರುತ ಎಂಬ ವಿಶ್ರಾಂತಿ ಧಾಮವನ್ನು ನಿರ್ಮಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸರಿಯಾದ ನಿರ್ವಹಣೆಯಿಲ್ಲದೇ ಮಲಯ ಮಾರುತ ವಿಶ್ರಾಂತಿ ಗೃಹ ಸೊರಗಿದೆ.

ಕಟ್ಟಡದ ಸುತ್ತಲೂ ಪಾಚಿ ಕಟ್ಟಿದೆ. ಸುಣ್ಣಬಣ್ಣ ಕಾಣದೆ ಹಲವು ವರ್ಷಗಳೆ ಕಳೆದಿದೆ. ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇನ್ನಾದಾರೂ ಅರಣ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಿ ಮಲಯ ಮಾರುತ ವಿಶ್ರಾಂತಿ ಧಾಮವನ್ನು ದುರಸ್ತಿಗೊಳಿಸುವ ಕೆಲಸ ಮಾಡಬೇಕಾಗಿದೆ.

ABOUT THE AUTHOR

...view details