ಕರ್ನಾಟಕ

karnataka

ETV Bharat / state

ಸರ್ಕಾರಿ ಹಣ ದುರುಪಯೋಗ: ತರೀಕೆರೆ ಅರಣ್ಯ ಇಲಾಖೆ ನೌಕರನಿಗೆ ಜೈಲು ಶಿಕ್ಷೆ

ತರೀಕೆರೆ ತಾಲೂಕಿನ ಜೆಎಂಎಫ್​ಸಿ ನ್ಯಾಯಾಲಯ, ಸರ್ಕಾರಿ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Government money laundering case: Tarikere JMFC court sentenced punishment
ಸರ್ಕಾರಿ ಹಣ ದುರುಪಯೋಗ: ಆರೋಪಿಗೆ ಶಿಕ್ಷೆ ವಿಧಿಸಿದ ತರೀಕೆರೆ ಜೆಎಂಎಫ್​ಸಿ ನ್ಯಾಯಲಯ

By

Published : Aug 31, 2020, 11:42 AM IST

ಚಿಕ್ಕಮಗಳೂರು:ಸರ್ಕಾರಿ ಹಣ ದುರುಪಯೋಗಪಡಿಸಿಕೊಂಡ ಆರೋಪಿಗೆ ಜಿಲ್ಲೆಯ ತರೀಕೆರೆ ತಾಲೂಕು ಜೆಎಂಎಫ್​ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಸರ್ಕಾರಿ ಹಣ ದುರುಪಯೋಗ: ಆರೋಪಿಗೆ ಶಿಕ್ಷೆ ವಿಧಿಸಿದ ತರೀಕೆರೆ ಜೆಎಂಎಫ್​ಸಿ ನ್ಯಾಯಲಯ

ಮೇಲಾಧಿಕಾರಿ ಸಹಿ ನಕಲು ಮಾಡಿ ಹಣ ದುರುಪಯೋಗ ಮಾಡಿಕೊಂಡಿದ್ದ ಆರೋಪಿ ಮೋಹನ್ ಕುಮಾರ್​ಗೆ ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ಆರೋಪಿಯು ಸರ್ಕಾರಕ್ಕೆ 2 ಕೋಟಿ ರೂ. ದಂಡ ಕಟ್ಟಬೇಕು ಎಂದು ಕೋರ್ಟ್ ಆದೇಶಿಸಿದೆ.

ಅರಣ್ಯ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ಆರೋಪಿ ಮೋಹನ್ ಕುಮಾರ್ ಒಂದು ಕೋಟಿಗೂ ಹೆಚ್ಚು ಹಣ ದುರುಪಯೋಗ ಮಾಡಿರುವ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತ್ತು. ಮೋಹನ್ ಕುಮಾರ್ ತರೀಕೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ.

ABOUT THE AUTHOR

...view details