ಚಿಕ್ಕಮಗಳೂರು: ಸರ್ಕಾರಿ ಜಮೀನು ವಿವಾದದಿಂದ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಪಿಡಿಒ ಒಮಿನಿ ಕಾರಿಗೆ ಬೆಂಕಿ ಹಚ್ಚಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ ಶಂಬೈನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸರ್ಕಾರಿ ಜಮೀನು ವಿವಾದ: 2 ಗುಂಪುಗಳ ನಡುವೆ ಘರ್ಷಣೆ, ಹಲವರಿಗೆ ಗಂಭೀರ ಗಾಯ - ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಮೀನು ವಿವಾದ ಗುಂಪುಗಳ ನಡುವೆ ಘರ್ಷಣೆ ಹಲವರಿಗೆ ಗಾಯ
ಬಗರ್ ಹುಕುಂ ಜಮೀನಿಗಾಗಿ ಎರಡು ಕುಟುಂಬಗಳ ನಡುವೆ ಕಲಹ ಉಂಟಾಗಿದೆ. ಇದೇ ವೇಳೆ ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಜಮೀನಿನಲ್ಲೇ ಮಾರಾಮಾರಿ ನಡೆದಿದೆ.
ಬಗರ್ ಹುಕುಂ ಜಮೀನಿಗಾಗಿ ಎರಡು ಕುಟುಂಬಗಳ ನಡುವೆ ಕಲಹ ನಡೆದಿದೆ. ಇದೆ ವೇಳೆ, ಎರಡು ಕುಟುಂಬಗಳ ನಡುವೆ ಮಾತಿಗೆ ಮಾತು ಬೆಳೆದು ಜಮೀನಿನಲ್ಲೇ ಮಾರಾಮಾರಿ ನಡೆದಿದೆ. ಹಲವರಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಿಡಿಒ ಹನುಮಂತಪ್ಪ ಹಾಗೂ ಇನ್ನೊಂದು ಕುಟುಂಬದ ನಡುವೆ ಜಗಳ ತಾರಕಕ್ಕೇರಿ ಈ ಘಟನೆ ನಡೆದಿದೆ. ಅಜ್ಜಂಪುರ ಪೊಲೀಸರು ಭದ್ರಾವತಿ ತಾಲೂಕಿನ ಪಿಡಿಒ ಹನುಮಂತಪ್ಪ ಹಾಗೂ ಇನ್ನೊಂದು ಗುಂಪಿನ ಕಲ್ಲೇಶ್ ಹಾಗೂ ಪ್ರಶಾಂತ್ ವಶಕ್ಕೆ ಪಡೆದಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.
ಸ್ಥಳಕ್ಕೆ ಎಸ್.ಪಿ ಅಕ್ಷಯ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಶಂಭೈನೂರು ಗ್ರಾಮದಲ್ಲಿ ಬೂದಿ ಮುಚ್ಚಿದ ವಾತಾವರಣ ನಿರ್ಮಾಣವಾಗಿದೆ. ಶಂಬೈನೂರು ಗ್ರಾಮದಲ್ಲಿ ಕೆ.ಎಸ್.ಆರ್.ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.