ಚಿಕ್ಕಮಗಳೂರು:ಜಿಲ್ಲೆಯ ಶೃಂಗೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ಅಸಹಕಾರದ ಮಧ್ಯೆಯೂ ನುಡಿ ಜಾತ್ರೆಗೆ ಸಕಲ ಸಿದ್ದತೆ ನಡೆದಿದೆ.
ಸರ್ಕಾರದ ಅಸಹಕಾರದ ನಡುವೆಯೂ, ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ - ಊಟದ ಸಾಮಾಗ್ರಿಗಳನ್ನು ಶೃಂಗೇರಿ ಮಠ ನೀಡಿ ಈ ಸಮ್ಮೇಳನಕ್ಕೆ ಬೆಂಬಲ ನೀಡಿದೆ
ಜಿಲ್ಲೆಯ ಶೃಂಗೇರಿಯಲ್ಲಿ ನಡೆಯುತ್ತಿರುವ ಜಿಲ್ಲಾ ಮಟ್ಟದ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರದ ಅಸಹಕಾರದ ಮಧ್ಯೆಯೂ ನುಡಿ ಜಾತ್ರೆಗೆ ಸಕಲ ಸಿದ್ದತೆ ನಡೆದಿದೆ.
![ಸರ್ಕಾರದ ಅಸಹಕಾರದ ನಡುವೆಯೂ, ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ Kn_Ckm_06_Matta_Sahakara_av_7202347](https://etvbharatimages.akamaized.net/etvbharat/prod-images/768-512-5657594-thumbnail-3x2-eshw.jpg)
ಸರ್ಕಾರದ ವಿರೋಧದ ನಡುವೆಯೂ ಶೃಂಗೇರಿ ಮಠದಿಂದ ಸಮ್ಮೇಳನಕ್ಕೆ ಬೆಂಬಲ ದೊರೆತಿದ್ದು, ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಊಟದ ಸಾಮಗ್ರಿಗಳನ್ನು ಶೃಂಗೇರಿ ಮಠ ನೀಡಿ ಈ ಸಮ್ಮೇಳನಕ್ಕೆ ಬೆಂಬಲ ನೀಡಿದೆ. ಸಮ್ಮೇಳನಾಧ್ಯಕ್ಷರನ್ನು ಬದಲಿಸುವಂತೆ ನಕ್ಸಲ್ ವಿರೋಧಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳಿಂದ ಇಂದು ಶೃಂಗೇರಿ ಬಂದ್ ಗೆ ಕರೆ ನೀಡಲಾಗಿದ್ದು, ಸಮ್ಮೇಳನಾಧ್ಯಕ್ಷರಿಗೆ ನಕ್ಸಲ್ ನಂಟಿದೆ ಎಂದು ನಕ್ಸಲ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸುತ್ತಿದೆ.
ಅಲ್ಲದೇ ಸಮ್ಮೇಳನಕ್ಕೆ ಭದ್ರತೆ ಒದಗಿಸಲು ಚಿಕ್ಕಮಗಳೂರು ಎಸ್ಪಿ ಹರೀಶ್ ಪಾಂಡೆ ಹಿಂದೇಟು ಹಾಕಿದ್ದಾರೆ. ಇಂದಿನಿಂದ ಎರಡು ದಿನ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆಯನ್ನು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಡಿಕೊಂಡಿದ್ದು, ಶೃಂಗೇರಿಯಲ್ಲಿ ಈಗಾಗಲೇ ವೇದಿಕೆ, ಸೇರಿ ಕಾರ್ಯಕ್ರಮದ ಸಕಲ ಸಿದ್ಧತೆ ನಡೆಯುತ್ತಿದೆ.