ಚಿಕ್ಕಮಗಳೂರು: ಮಳೆ ಇಲ್ಲದೆ ಕೆರೆಗಳು ಬತ್ತಿ ಹೋಗಿ ಸಂಕಷ್ಟದಲ್ಲಿದ್ದ ಕಡೂರು ತಾಲೂಕಿನ ಅನ್ನದಾತರಿಗೆ ಸರ್ಕಾರ ಶುಭ ಸುದ್ದಿ ನೀಡಿದೆ. ತಾಲೂಕಿನ 114 ಕೆರೆಗಳನ್ನು ತುಂಬಿಸಲು ತೀರ್ಮಾನಿಸಿದೆ.
ಕಡೂರು ತಾಲೂಕಿನ 114 ಕೆರೆ ತುಂಬಿಸಲು ಸರ್ಕಾರ ನಿರ್ಧಾರ: ರೈತನ ಮೊಗದಲ್ಲಿ ಮಂದಹಾಸ - ಚಿಕ್ಕಮಗಳೂರು ಹಾಸನದ ಕರೆ ತುಂಬಿಸಲು ಸರ್ಕಾರ ನಿರ್ಧಾರ
ಕಡೂರು ತಾಲೂಕಿನ 114 ಸೇರಿಂದತೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಒಟ್ಟು 197 ಕೆರೆಗಳನ್ನು ತುಂಬಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.
ಕಡೂರು ತಾಲೂಕಿನ 114 ಕೆರೆಗಳು ಸೇರಿದಂತೆ ಚಿಕ್ಕಮಗಳೂರು ತಾಲೂಕಿನ 48, ತರೀಕೆರೆ ತಾಲೂಕಿನ 31 ಕೆರೆಗಳನ್ನು ತುಂಬಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಜೊತೆಗೆ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ 4 ಕೆರೆಗಳನ್ನೂ ತುಂಬಿಸಲು ಸರ್ಕಾರ ಮುಂದಾಗಿದೆ. ಎರಡು ಜಿಲ್ಲೆಗಳ ಒಟ್ಟು 197 ಕೆರೆಗಳನ್ನು 1,281 ಕೋಟಿ ರೂ. ವೆಚ್ಚದಲ್ಲಿ ತುಂಬಿಸಲು ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ರೈತರ ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದಂತಾಗಿದೆ.
ಕೆರೆಯ ಒಟ್ಟು ಶೇಖರಣಾ ಸಾಮರ್ಥ್ಯದ ಶೇ. 50ರಷ್ಟು ತುಂಬಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಅಂತರ್ಜಲ ಅಭಿವೃದ್ಧಿಯಾಗುವುದಲ್ಲದೆ ಕೃಷಿ ಚಟುವಟಿಕೆಗಳಿಗೂ ಕೂಡ ಸಹಾಯವಾಗಲಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ 32 ಕೆರೆಗಳನ್ನು ತುಂಬಿಸಲು 406 ಕೋಟಿ, ಎರಡನೇ ಹಂತದಲ್ಲಿ 66 ಕೆರೆಗಳನ್ನು ತುಂಬಿಸಲು 299 ಕೋಟಿ, 3ನೇ ಹಂತದಲ್ಲಿ 99 ಕೆರೆಗಳನ್ನು ತುಂಬಿಸಲು 477 ಕೋಟಿ, 4ನೇ ಹಂತದಲ್ಲಿ 100 ಕೋಟಿ ವೆಚ್ಚದಲ್ಲಿ ಕೆರೆಗಳನ್ನು ತುಂಬಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.