ಚಿಕ್ಕಮಗಳೂರು:ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನ ಸ್ಥಿತಿ ಗಂಭೀರವಾಗಿರುವ ಘಟನೆ ಮೂಡಿಗೆರೆ ತಾಲೂಕಿನ ಸಕಲೇಶಪುರ ರಸ್ತೆಯ ಮುದ್ರೆಮನೆ ಬಳಿ ನಡೆದಿದೆ.
ಬಸ್, ಬೈಕ್ ಮುಖಾಮುಖಿ ಡಿಕ್ಕಿ.. ಚಿಂತಾಜನಕ ಸ್ಥಿತಿಯಲ್ಲಿ ಬೈಕ್ ಸವಾರ - Government bus and bike
ಬೈಕ್ ಸವಾರ ರತನ್ (24) ಸ್ಥಿತಿ ಗಂಭೀರವಾಗಿದ್ದು, ಗಾಯಗೊಂಡ ವ್ಯಕ್ತಿ ಮೂಡಿಗೆರೆಯ ಸರ್ವೋದಯ ನಗರದವನಾಗಿದ್ದಾನೆ. ಸರ್ವೋದಯ ನಗರದಿಂದ ಬೈಕಿನಲ್ಲಿ ಗೊಣಿಬೀಡು ಅಗ್ರಹಾರದಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಡಿಕ್ಕಿ
ಬೈಕ್ ಸವಾರ ರತನ್ (24) ಸ್ಥಿತಿ ಗಂಭೀರವಾಗಿದ್ದು, ಈತ ಮೂಡಿಗೆರೆ ಸರ್ವೋದಯ ನಗರದವನಾಗಿದ್ದಾನೆ. ಸರ್ವೋದಯ ನಗರದಿಂದ ಬೈಕಿನಲ್ಲಿ ಗೊಣಿಬೀಡು ಅಗ್ರಹಾರದಲ್ಲಿ ನಡೆಯುತ್ತಿದ್ದ ಜಾತ್ರಾ ಮಹೋತ್ಸವಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಗಾಯಗೊಂಡ ರತನ್ಗೆ ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನೆ ಮಾಡಲಾಗಿದೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.