ಕರ್ನಾಟಕ

karnataka

ETV Bharat / state

ಹೊಸಪೇಟೆ ಹಳ್ಳದಲ್ಲಿ ಕೊಚ್ಚಿಹೋದ ಬಾಲಕಿ.. ಎಸ್​ಡಿಆರ್​ಎಫ್ ತಂಡದಿಂದ ಶೋಧ ಕಾರ್ಯಾಚರಣೆ - the girl drowned in water hospet chikkamagalur

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರ-3 ದಿನದ ಹಿಂದೆ ಕೊಚ್ಚಿಹೋಗಿರುವ ಬಾಲಕಿ-ಮೃತದೇಹ ಪತ್ತೆಗೆ 20 ಜನರ ಎಸ್ ಡಿ ಆರ್ ಎಫ್ ತಂಡದಿಂದ ಕಾರ್ಯಾಚರಣೆ

girl-drowned-away-in-water-at-hospet
ಹೊಸಪೇಟೆಯಲ್ಲಿ ಕೊಚ್ಚಿಹೋದ ಬಾಲಕಿ : ಎಸ್ ಡಿ ಆರ್ ಎಫ್ ತಂಡದಿಂದ ಕಾರ್ಯಾಚರಣೆ

By

Published : Jul 6, 2022, 4:19 PM IST

ಚಿಕ್ಕಮಗಳೂರು : ತಾಲೂಕಿನ ಹೊಸಪೇಟೆಯಲ್ಲಿ ಸುರಿದ ಭಾರಿ ಮಳೆಗೆ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿ ಹೋಗಿರುವ ಬಾಲಕಿಯ 40 ಗಂಟೆ ಕಳೆದರೂ ಪತ್ತೆಯಾಗಿಲ್ಲ. ಕಳೆದ ಮೂರು ದಿನಗಳ ಹಿಂದೆ ಬಾಲಕಿ ಸುಪ್ರೀತ ಹೋಸಪೇಟೆಯ ಹಳ್ಳದಲ್ಲಿ ಕೊಚ್ಚಿಹೋಗಿದ್ದಳು.

ಹೊಸಪೇಟೆಯಲ್ಲಿ ಕೊಚ್ಚಿಹೋದ ಬಾಲಕಿ : ಎಸ್ ಡಿ ಆರ್ ಎಫ್ ತಂಡದಿಂದ ಶೋಧ ಕಾರ್ಯಾಚರಣೆ

ಬಾಲಕಿ ಸುಪ್ರೀತ ಪತ್ತೆಗಾಗಿ 20 ಜನರ ಎಸ್ ಡಿ ಆರ್ ಎಫ್ ತಂಡ ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮಕ್ಕೆ ಆಗಮಿಸಿದ್ದು, ಈಗಾಗಲೇ ಶೋಧ ಕಾರ್ಯ ಮುಂದುವರಿಸಿದೆ. ತಂಡದಲ್ಲಿ ಮುಳುಗು ತಜ್ಞ ಮಲ್ಪೆ ಈಶ್ವರ್ ಕೂಡ ಇದ್ದಾರೆ.

ಕಳೆದ ಮೂರು ದಿನಗಳಿಂದ ಬಾಲಕಿ ಸುಪ್ರೀತ ಪತ್ತೆಗಾಗಿ ನಿರಂತರ ಶೋಧ ಕಾರ್ಯಾಚರಣೆ ಮುಂದುವರಿಸಿದ್ದು, ಮೃತದೇಹ ಈವರೆಗೆ ಪತ್ತೆಯಾಗಿಲ್ಲ. ಸದ್ಯ ಕೊಚ್ಚಿ ಹೋಗಿರುವ ಸ್ಥಳದಿಂದ ಎಸ್ ಡಿ ಆರ್ ಎಫ್ ತಂಡ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ವೇಳೆ ತಾಲೂಕು ಆಡಳಿತ, ಜಿಲ್ಲಾಡಳಿತ, ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಓದಿ :ಡ್ರಗ್ಸ್​ ಪ್ರಕರಣದ ಆರೋಪಿ ಕಿಶೋರ್ ಶೆಟ್ಟಿ ಅಂಗಿ ಬಿಚ್ಚಿಸಿ ನೀತಿ ಪಾಠ ಮಾಡಿದ ಕಮಿಷನರ್​

ABOUT THE AUTHOR

...view details