ಚಿಕ್ಕಮಗಳೂರು:ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿರುವ 40 ಕುಟುಂಬಗಳ ಸಂತ್ರಸ್ತರ ನೋವನ್ನು ಮೂಡಿಗೆರೆ ತಾಲೂಕಿನ ಜನ ನಾಯಕರು ಅರಿತುಕೊಂಡಿರುವ ಹಾಗೇ ಕಾಣಿಸುತ್ತಿದೆ.
ನಿರಾಶ್ರಿತರ ಕೇಂದ್ರದಲ್ಲೇ ಸಂತ್ರಸ್ತರ ಜೊತೆ ಜನ ನಾಯಕರು ಗೌರಿ-ಗಣೇಶ ಹಬ್ಬ ಆಚರಣೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿರುವ ನಿರಾಶ್ರಿತರ ಕೇಂದ್ರದಲ್ಲಿರುವ 40 ಕುಟುಂಬಗಳ ಸಂತ್ರಸ್ತರ ನೋವನ್ನು ಮೂಡಿಗೆರೆ ತಾಲೂಕಿನ ಜನ ನಾಯಕರು ಅರಿತು ಸಂತ್ರಸ್ತರ ಜೊತೆ ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಜನರ ನೋವನ್ನು ಜನ ನಾಯಕರು ಅರಿತುಕೊಂಡಿದ್ದು, ಮತ ಹಾಕಿದವರ ನೋವಿಗೆ ಅವರು ಮರುಗಿ ಹೋಗಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿಯೇ ಸಂತ್ರಸ್ತರ ಜೊತೆ ಗೌರಿ-ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ. ಸಂತ್ರಸ್ತರೊಂದಿಗೆ ಮೂಡಿಗೆರೆಯ ತಾಲ್ಲೂಕು ಪಂಚಾಯತಿ ಅಧ್ಯಕ್ಷ ರತನ್ ಹಾಗೂ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಗೌರಿ-ಗಣೇಶ ಹಬ್ಬವನ್ನು ಆಚರಣೆ ಮಾಡಿದ್ದಾರೆ.
ಸಂತ್ರಸ್ತರನ್ನು ಕೂರಿಸಿ ಪ್ರತಿಯೊಬ್ಬರಿಗೂ ಅಡುಗೆ ಮತ್ತು ಸಿಹಿಯನ್ನು ಬಡಿಸಿ ಅವರ ಬಾಳು ಕೂಡ ಸದಾ ಸಿಹಿ ಆಗಿರುವಂತೆ ಹಾರೈಸಿದ್ದಾರೆ. ಮಧುಗುಂಡಿ, ಆಲೇಖಾನ್ ಹೊರಟ್ಟಿ ಗ್ರಾಮದ ಸಂತ್ರಸ್ತರಿಗೆ ಖುದ್ದಾಗಿ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಸಿಹಿ ಬಡಿಸಿ ಹಬ್ಬವನ್ನು ಆಚರಣೆ ಮಾಡಿದ್ದಾರೆ.