ಚಿಕ್ಕಮಗಳೂರು:ಅವಧೂತ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ಚರ್ಚೆಗೀಡು ಮಾಡಿದೆ. ಎರಡು ವರ್ಷದ ಹಿಂದಿನ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.
ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಕೊರಳಲ್ಲಿ ಹುಲಿ ಉಗುರು ಧರಿಸಿ ವಿವಾದಕ್ಕೀಡಾದ ಬೆನ್ನಲ್ಲೇ ಅರಣ್ಯ ಅಧಿಕಾರಿಗಳು ರಾಜ್ಯಾದ್ಯಂತ ಕಾರ್ಯಾಚರಣೆಗೆ ಇಳಿದಿದ್ದಾರೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯ ಆಶ್ರಮದ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೊ ಎಲ್ಲೆಡೆ ಮತ್ತೆ ವೈರಲ್ ಆಗುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆಶ್ರಮಕ್ಕೆ ಆಗಮಿಸಿ ತಪಾಸಣೆ ಮಾಡಿದ್ದು, ದಾಖಲೆ ಪತ್ರಗಳನ್ನು ಪಡೆದುಕೊಂಡಿದ್ದಾರೆ.
ಭಕ್ತರಾದ ಶಿವಮೊಗ್ಗ ಮೂಲದ ಡಿ.ಆರ್.ಅಮರೇಂದ್ರ ಕಿರೀಟಿ ಎಂಬವರು ಆಶ್ರಮಕ್ಕೆ ಎರಡು ವರ್ಷದ ಹಿಂದೆ ಹುಲಿ ಚರ್ಮವನ್ನು ಕೊಡುಗೆಯಾಗಿ ನೀಡಿದ್ದರು. ಇದು 80 ವರ್ಷ ಹಳೆಯದ್ದಾಗಿದೆ. ಹುಲಿ ಚರ್ಮ ನೀಡುವ ಸಂದರ್ಭದಲ್ಲಿ ಶಿವಮೊಗ್ಗದ ವನ್ಯಪ್ರಾಣಿ ವಿಭಾಗದ ಉಪ ಅರಣ್ಯಾಧಿಕಾರಿಗಳಿಂದ ಅನುಮತಿ ಪಡೆದಿದ್ದರು. (The Assistant wild life warden Declaration of Trophy Form 11 Rule 34 god Possession Certificate) ಕಲಂ 43(1) ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ, Assistant wild life warden Form 11 ಅನ್ನು ಲಗತ್ತಿಸಿ ಆಶ್ರಮಕ್ಕೆ ಹುಲಿ ಚರ್ಮವನ್ನು ಹಸ್ತಾಂತರ ಮಾಡಲಾಗಿತು. ಹುಲಿ ಚರ್ಮ ಇಟ್ಟುಕೊಳ್ಳುವುದು ತಪ್ಪು ಎಂದು ಅರಿತು ಮತ್ತೆ ಇಲಾಖೆಗೆ ಗೌರಿಗದ್ದೆ ಆಶ್ರಮ ಹಿಂದಿರುಗಿಸಿತ್ತು.
20-05-2023ರಲ್ಲಿ ಶಿವಮೊಗ್ಗದ ವನ್ಯಜೀವಿ ವಲಯ ಅರಣ್ಯಾಧಿಕಾರಿಗೆ ಹುಲಿ ಚರ್ಮ ಹಸ್ತಾಂತರ ಮಾಡಿದ್ದು, ಈಗಾಗಲೇ ಐದು ತಿಂಗಳು ಕಳೆದಿದೆ. ಈ ಎಲ್ಲಾ ದಾಖಲೆ ಪತ್ರಗಳು ಆಶ್ರಮದ ಬಳಿ ಇದ್ದು, ಬಹಿರಂಗಪಡಿಸಲಾಗಿದೆ.