ಚಿಕ್ಕಮಗಳೂರು: ಗಾಂಜಾ ಮಾರಾಟ ಮಾಡುವ ವೇಳೆ, ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಗಾಂಜಾ ಮಾರಾಟ: ಐವರ ಬಂಧನ - ಚಿಕ್ಕಮಗಳೂರು ಗಾಂಜ
ಗಾಂಜಾ ಮಾರಾಟ ಮಾಡುವ ವೇಳೆ, ಸ್ಥಳೀಯರ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Ganja
ರೋಷನ್ ಸಮೀರ್, ಪುನೀತ್, ಅಬುಬಕ್ಕರ್, ಸಾಧತ್ ಅಲಿ, ಮೊಹಮ್ಮದ್ ಇಮ್ರಾಜ್ ಬಂದಿತ ಆರೋಪಿಗಳು. ಇವರು ನಗರದ ಹೊರವಲಯದ ಮೂಗ್ತಿಹಳ್ಳಿ ಕೆರೆ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ಪಿ.ಐ ಸೆನ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು, ಬಂಧತರಿಂದ 7.5 ಲಕ್ಷ ರೂ. ಮೌಲ್ಯದ ಬರೋಬ್ಬರಿ 30 ಕೆಜಿ ಗಾಂಜಾ¸ 1 ಬೈಕ್, 1 ಲಗೇಜ್ ಆಟೋ , 7 ಮೊಬೈಲ್ಗಳನ್ನು ವಶಕ್ಕೆ ಪಡೆದಿದ್ದಾರೆ.