ಚಿಕ್ಕಮಗಳೂರು: ಒಂದೇ ಕಟ್ಟಡದಲ್ಲಿದ್ದ ನಾಲ್ಕು ಅಂಗಡಿಗಳಲ್ಲಿ ಕಳ್ಳತನ ನಡೆಸಿರುವ ಘಟನೆ ನಗರದ ಎಂ. ಜಿ. ರಸ್ತೆಯ ಗೋರೂರು ಕಟ್ಟಡದಲ್ಲಿ ನಡೆದಿದೆ. ರಾತ್ರೋ ರಾತ್ರಿ ಕಟ್ಟಡಕ್ಕೆ ನುಗ್ಗಿದ ಕಳ್ಳರು ಫೋಟೋ ಸ್ಟುಡಿಯೋ, ಖಾಸಗಿ ಇನ್ಸೂರೆನ್ಸ್ ಕಂಪನಿ, ಕೃಷಿ ಉಪಕರಣಗಳ ಅಂಗಡಿ ಸೇರಿದಂತೆ ನಾಲ್ಕು ಅಂಗಡಿಗಳ ಮೇಲೆ ಕೈ ಚಳಕ ತೋರಿದ್ದಾರೆ.
ಒಂದೇ ಕಟ್ಟಡದ ನಾಲ್ಕು ಅಂಗಡಿ ಕಳ್ಳತನ: ಪ್ರಕರಣ ದಾಖಲು - ಚಿಕ್ಕಮಗಳೂರು ಜಿಲ್ಲಾ ಸುದ್ದಿ
ರಾತ್ರೋರಾತ್ರಿ ಚಿಕ್ಕಮಗಳೂರಿನ ಎಂ.ಜಿ. ರಸ್ತೆಯ ಗೋರೂರು ಕಟ್ಟಡಕ್ಕೆ ನುಗ್ಗಿದ ಕಳ್ಳರು ಫೋಟೋ ಸ್ಟುಡಿಯೋ, ಖಾಸಗಿ ಇನ್ಸೂರೆನ್ಸ್ ಕಂಪನಿ, ಕೃಷಿ ಉಪಕರಣಗಳ ಅಂಗಡಿ ಸೇರಿದಂತೆ ನಾಲ್ಕು ಅಂಗಡಿಗಳ ಮೇಲೆ ಕೈ ಚಳಕ ತೋರಿ ಸುಮಾರು 77 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
![ಒಂದೇ ಕಟ್ಟಡದ ನಾಲ್ಕು ಅಂಗಡಿ ಕಳ್ಳತನ: ಪ್ರಕರಣ ದಾಖಲು four-shop-theft-in-the-same-building-at-chikkamagalore](https://etvbharatimages.akamaized.net/etvbharat/prod-images/768-512-13399840-thumbnail-3x2-kdkdd.jpg)
ನಾಲ್ಕು ಅಂಗಡಿ ಕಳ್ಳತನ
ಮೂರು ಅಂಗಡಿಗೆ ನುಗ್ಗಿ ಹಣಕ್ಕಾಗಿ ಹುಡುಕಾಟ ನಡೆಸಿದ ಕಳ್ಳರು, ಏನೂ ಸಿಗದ ಕಾರಣ ಹಿಂದಿರುಗುತ್ತಿದ್ದಾಗ ಅದೇ ಕಟ್ಟಡದಲ್ಲಿದ್ದ ಮತ್ತೊಂದು ಅಂಗಡಿಗೆ ನುಗ್ಗಿ ಬರೋಬ್ಬರಿ 77 ಸಾವಿರ ಹಣ ದೋಚಿ ಪರಾರಿಯಾಗಿದ್ದಾರೆ. ಅಂಗಡಿಯಲ್ಲಿದ್ದ ಹಣ ಮಾತ್ರ ಕೊಂಡೊಯ್ಯದೇ ಅಲ್ಲಿದ್ದ ಕೃಷಿ ಭೂಮಿ ಮತ್ತು ಸೈಟ್ ಗಳ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.