ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರಲ್ಲಿ ಇಂದು ಮತ್ತೆ 4 ಕೊರೊನಾ ಪ್ರಕರಣ ಪತ್ತೆ

ನಾಲ್ಕು ಜನರು ಮಹಾರಾಷ್ಟ್ರ ಮೂಲದಿಂದ ಬಂದವರಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಈ ನಾಲ್ಕು ಜನರ ಜೊತೆಗಿನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚುವ ಕಾರ್ಯ ಪ್ರಾರಂಭ ಮಾಡಿದೆ.

Chikmagalur
ಚಿಕ್ಕಮಗಳೂರು

By

Published : Jun 16, 2020, 7:51 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಇಂದು 4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23ಕ್ಕೆ ಏರಿದೆ.

ಆದ್ರೆ ದಾಖಲಾದ ಪ್ರಕರಣಗಳಲ್ಲಿ ಎರಡು ಪ್ರಕರಣ ಲ್ಯಾಬ್ ರಿಪೋರ್ಟ್​ನಿಂದ ತಪ್ಪಾಗಿ ವರದಿ ಬಂದಿದ್ದವು. 16 ಜನ ಸೋಂಕಿತರು ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಆದರೆ ಇಂದು ಮತ್ತೆ 4 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ 3 ಪ್ರಕರಣ, ತರೀಕೆರೆ ತಾಲೂಕಿನಲ್ಲಿ 1 ಪ್ರಕರಣ ಪತ್ತೆಯಾಗಿದೆ. 33 ವರ್ಷದ ಪುರುಷ, 38 ವರ್ಷದ ಮಹಿಳೆ, 12 ವರ್ಷದ ಹೆಣ್ಣು ಮಗು, ಎಂಟು ವರ್ಷದ ಗಂಡು ಮಗುವಿನಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಇವರು ವಾಸ ಮಾಡುತ್ತಿದ್ದ ಏರಿಯಾವನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆ ಸೀಲ್ ​ಡೌನ್ ಮಾಡಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಈ ನಾಲ್ಕು ಜನರು ಮಹಾರಾಷ್ಟ್ರ ಮೂಲದಿಂದ ಬಂದವರಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಈ ನಾಲ್ಕು ಜನರ ಜೊತೆಗಿನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಹುಡುಕುವ ಕಾರ್ಯ ಪ್ರಾರಂಭ ಮಾಡಿದೆ. ಸೋಂಕಿತರನ್ನು ಜಿಲ್ಲಾ ಕೊವಿಡ್​ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣಗಳಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.

ABOUT THE AUTHOR

...view details