ಚಿಕ್ಕಮಗಳೂರು:ಮೂರು ಮನೆಯಲ್ಲಿದ್ದಸಿಲಿಂಡರ್ಗಳು ಸ್ಫೋಟಗೊಂಡು ನಾಲ್ಕು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 4 ಶೀಟ್ ಮನೆಗಳು ಸುಟ್ಟು ಕರಕಲಾಗಿವೆ.
ನರಸಿಂಹಪ್ಪ, ವಾಸು, ಭೀಮಣ್ಣ, ಬಸವರಾಜ್ ಎಂಬುವರಿಗೆ ಸೇರಿದ ಮನೆಗಳು ಬೆಂಕಿಯಲ್ಲಿ ಸುಟ್ಟು ಸಂಪೂರ್ಣ ಭಸ್ಮವಾಗಿದೆ. ಮೊದಲು ನರಸಿಂಹಪ್ಪ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಬಳಿಕ ಪಕ್ಕದ 2 ಮನೆಗಳ ಸಿಲಿಂಡರ್ಗಳು ಸಹ ಸ್ಫೋಟಗೊಂಡಿವೆ. ಮೂರು ಸಿಲಿಂಡರ್ಗಳ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿದೆ.