ಕರ್ನಾಟಕ

karnataka

ETV Bharat / state

ಮೂಡಿಗೆರೆಯಲ್ಲಿ ಅಪರೂಪದ ಮೂರು ಕಬ್ಬೆಕ್ಕುಗಳ ಸಾವು - ಹಳೆಕೋಟೆ ಗ್ರಾಮದ ಕಬ್ಬೆಕ್ಕುಗಳು ಸಾವು

ಮೂಡಿಗೆರೆಯ ಹಳೆಕೋಟೆ ಗ್ರಾಮದಲ್ಲಿ ಪತ್ತೆಯಾಗಿದ್ದ ಅಪರೂಪದ ಮೂರು ಕಬ್ಬೆಕ್ಕುಗಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿವೆ.

foumart Death in CKM
ಅಪರೂಪದ ಮೂರು ಕಬ್ಬೆಕ್ಕುಗಳು ಸಾವು

By

Published : Jun 25, 2020, 9:52 AM IST

ಚಿಕ್ಕಮಗಳೂರು: ಅಪರೂಪದ ಪ್ರಾಣಿ ಎನಿಸಿಕೊಂಡಿರುವ ಮೂರು ಕಬ್ಬೆಕ್ಕುಗಳು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.

ಕಳೆದ ಕೆಲ ದಿನಗಳ ಹಿಂದೆ ಮೂಡಿಗೆರೆ ತಾಲೂಕಿನ ಹಳೆಕೋಟೆ ಗ್ರಾಮದ ಹರ್ಷ ಎಂಬುವರ ಕಾಫಿ ತೋಟದಲ್ಲಿ ಬೃಹತ್​ ಗಾತ್ರದ ಕಬ್ಬೆಕ್ಕೊಂದು ನಿತ್ರಾಣಗೊಂಡಿರುವ ಪರಿಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಹರ್ಷ ಬೆಕ್ಕುಗಳ ಚಲನ ವಲನವೇ ಈ ರೀತಿ ಇರಬಹುದು ಎಂದು ನೋಡಿ ಸುಮ್ಮನಾಗಿದ್ದರು. ಇದಾದ ಎರಡು ದಿನಗಳ ನಂತರ ಎರಡು ಮರಿ ಕಬ್ಬೆಕ್ಕುಗಳು ಇದೇ ಸ್ಥಿತಿಯಲ್ಲಿ ಕಂಡು ಬಂದಿತ್ತು. ಇದನ್ನು ನೋಡಿದ ಹರ್ಷ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಅನಾರೋಗ್ಯ ಪೀಡಿತ ಕಬ್ಬೆಕ್ಕುಗಳನ್ನು ಸೆರೆ ಹಿಡಿದು ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ.

ಅಪರೂಪದ ಮೂರು ಕಬ್ಬೆಕ್ಕುಗಳು ಸಾವು

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೂರು ಕಬ್ಬೆಕ್ಕುಗಳು ಮೃತಪಟ್ಟಿವೆ. ಕಬ್ಬೆಕ್ಕುಗಳ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇದು ತುಂಬಾ ವಿಶೇಷವಾದ ಪ್ರಾಣಿಯಾಗಿದ್ದು, ಸಾಮಾನ್ಯವಾಗಿ ಜನರ ಕಣ್ಣಿಗೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಈ ಕಬ್ಬೆಕ್ಕಿನಲ್ಲಿ ಹಲವಾರು ಜಾತಿಗಳಿದ್ದು, ಕಪ್ಪು ಬಣ್ಣ ಹೊಂದಿರುವ ಈ ಕಬ್ಬೆಕ್ಕುಗಳು ತುಂಬಾ ವಿಶೇಷವಾದ ಹಾಗೂ ಅಪರೂಪದ ಪ್ರಾಣಿಯಾಗಿದೆ.

ABOUT THE AUTHOR

...view details