ಕರ್ನಾಟಕ

karnataka

ETV Bharat / state

ಶ್ರೀಗಂಧ ಬೆಳೆ ನಷ್ಟ: ಪರಿಹಾರಕ್ಕಾಗಿ ಸರ್ಕಾರಕ್ಕೆ ರಕ್ತದಲ್ಲಿ ಪತ್ರ

ಕಳೆದ ಒಂದು ತಿಂಗಳಿನಿಂದ ಜಿಲ್ಲೆಯಲ್ಲಿ ಶ್ರೀಗಂಧ ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದು, ಇಂದು ಸೀರೆಂಜ್​ ಮೂಲಕ ರಕ್ತ ತೆಗೆದು ಅದರಲ್ಲಿ ಪರಿಹಾರ ನೀಡಬೇಕು ಎಂದು ಬರೆದು ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ದಾರೆ.

blood
ರಕ್ತದಲ್ಲಿ ಪತ್ರ

By

Published : Mar 30, 2022, 10:03 PM IST

Updated : Mar 30, 2022, 10:24 PM IST

ಚಿಕ್ಕಮಗಳೂರು:ಶ್ರೀಗಂಧ ಬೆಳೆಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಶ್ರೀಗಂಧ ಬೆಳೆಗಾರರು ಸರ್ಕಾರಕ್ಕೆ ರಕ್ತದಲ್ಲಿ ಮನವಿ ಪತ್ರ ಬರೆದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ರಕ್ತದಲ್ಲಿ ಬರೆದ ಮನವಿ ಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಸಲ್ಲಿಸಲಾಗಿದೆ. ಕಳೆದ 30 ದಿನಗಳಿಂದ ಜಿಲ್ಲೆಯ ತರೀಕೆರೆ ತಾಲೂಕಿನ ಹಳಿಯೂರು ಗ್ರಾಮದಲ್ಲಿ ಶ್ರೀಗಂಧ ಬೆಳೆಗಾರರು ಅನಿರ್ದಿಷ್ಟಾವದಿ‌ ಧರಣಿಯನ್ನು ನಡೆಸುತ್ತಿದ್ದಾರೆ. ಪ್ರತಿಭಟನೆಯಲ್ಲಿ 22 ರೈತ ಕುಟುಂಬಗಳು ಭಾಗವಹಿಸಿವೆ.

ಪರಿಹಾರಕ್ಕಾಗಿ ಸರ್ಕಾರಕ್ಕೆ ರಕ್ತದಲ್ಲಿ ಪತ್ರ

ಶ್ರೀಗಂಧ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಿಂದ 22 ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳೆ ನಾಶಕ್ಕೆ 62 ಕೋಟಿ ಪರಿಹಾರ ನೀಡಬೇಕು ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿದೆ. ಅಲ್ಲದೇ ಈ ಬಗ್ಗೆ ಹೈಕೋರ್ಟ್​ ನಿರ್ದೇಶನವನ್ನೂ ಪಾಲನೆ ಮಾಡಲಾಗುತ್ತಿಲ್ಲ ಎಂದು ದೂರಿದ್ದಾರೆ. ಹೀಗಾಗಿ ಇಂದು ಪ್ರತಿಭಟನೆ ವೇಳೆ ಸೀರೆಂಜ್​ ಮೂಲಕ ರಕ್ತ ತೆಗೆದು, ಅದರಲ್ಲಿ ಪರಿಹಾರ ನೀಡಬೇಕು ಎಂದು ಬರೆದು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಇದನ್ನೂ ಓದಿ:ಆಸ್ಪತ್ರೆಯಲ್ಲಿ ಮೃತಪಟ್ಟ ತಾಯಿಯ ಮೃತದೇಹ ಮಂಚದಲ್ಲಿ ಹೊತ್ತು ಸಾಗಿದ ಹೆಣ್ಣು ಮಕ್ಕಳು!

Last Updated : Mar 30, 2022, 10:24 PM IST

ABOUT THE AUTHOR

...view details