ಚಿಕ್ಕಮಗಳೂರು :ದಲಿತ ಹೆಣ್ಣುಮಗಳ ಮೇಲೆ ನಡೆದ ಪೈಶಾಚಿಕ ಕೃತ್ಯ ಖಂಡಿಸುತ್ತೇನೆ ಎಂದು ಜೆಡಿಎಸ್ ಪಕ್ಷದ ಮಾಜಿ ಶಾಸಕ ವೈ ಎಸ್ ವಿ ದತ್ತಾ ಹೇಳಿದ್ದಾರೆ. ಗಾಂಧಿ ಜಯಂತಿಯ ಪ್ರಯುಕ್ತ ದಲಿತಕೇರಿಯಲ್ಲಿ ಸಹಪಂಕ್ತಿ ಭೋಜನ ಮಾಡಿದ ಬಳಿಕ ವೈಎಸ್‌ವಿ ದತ್ತಾ ಹೇಳಿಕೆ ನೀಡಿದ್ದು, ಉತ್ತರಪ್ರದೇಶದಲ್ಲಿ ನಡೆದ ಘಟನೆಗೆ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಕಾಮುಕರಿಗೆ ಶಿಕ್ಷೆ ತಪ್ಪಿಸಲು ರಾತ್ರೋರಾತ್ರಿ ಅಂತ್ಯಕ್ರಿಯೆ, ಇದು ಮನುಷ್ಯ ಸರ್ಕಾರನಾ.. ದತ್ತಾ ಪ್ರಶ್ನೆ - ಚಿಕ್ಕಮಗಳೂರು ಅಪರಾಧ ಸುದ್ದಿ
ಯುವಕರು ರಾಮ, ಅಯೋಧ್ಯಾ, ಹಿಂದುತ್ವ ಅಂದ್ರೆ ಪ್ರಪಂಚ ಸರಿಯಾಗುತ್ತೆ ಅಂತಾ ತಿಳಿದಿದ್ದಾರೆ. ಈ ರೀತಿ ಹೋದ್ರೆ ರಾಜಕಾರಣಿಗಳು ಮಾತ್ರ ನೆಟ್ಟಗಾಗುತ್ತಾರೆ. ಆದರೆ, ನಮ್ಮ ಅಕ್ಕ-ತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತೆ..
ಮಾಜಿ ಶಾಸಕ ವೈ.ಎಸ್.ವಿ ದತ್ತಾ ಪ್ರತಿಕ್ರಿಯೆ
ಆರೋಪಿಗಳಿಗೆ ಶಿಕ್ಷೆ ತಪ್ಪಿಸಲು ರಾತ್ರೋರಾತ್ರಿ ಅಂತ್ಯಸಂಸ್ಕಾರ ಮಾಡಲಾಗಿದೆ. ಇದು ಮನುಷ್ಯ ಸರ್ಕಾರನಾ? ಮೃಗೀಯ ಸರ್ಕಾರನಾ? ಎಂದು ಪ್ರಶ್ನೆ ಮಾಡಿದ್ದಾರೆ.
ಯುವಕರು ರಾಮ, ಅಯೋಧ್ಯಾ, ಹಿಂದುತ್ವ ಅಂದ್ರೆ ಪ್ರಪಂಚ ಸರಿಯಾಗುತ್ತೆ ಅಂತಾ ತಿಳಿದಿದ್ದಾರೆ. ಈ ರೀತಿ ಹೋದ್ರೆ ರಾಜಕಾರಣಿಗಳು ಮಾತ್ರ ನೆಟ್ಟಗಾಗುತ್ತಾರೆ. ಆದರೆ, ನಮ್ಮ ಅಕ್ಕ-ತಂಗಿಯರನ್ನು ಕಳೆದುಕೊಳ್ಳಬೇಕಾಗುತ್ತೆ ಎಂದು ಹೇಳಿದರು.