ಚಿಕ್ಕಮಗಳೂರು:ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಸರ್ಕಾರವು ರಾಜಕೀಯ ಬೇಳೆ ಬೇಯಿಸಿಕೊಳ್ಳಲು, ಎಸ್ಡಿಪಿಐ, ಕಾಂಗ್ರೆಸ್, ಜಾತ್ಯತೀತ, ಕೋಮುವಾದಿ, ಸೆಕ್ಯುಲರ್ ಎಂದು ಹೇಳಿಕೊಂಡು ಸುಮ್ಮನೆ ಕುಳಿತು ಕೊಳ್ಳಬಾರದು ಎಂದು ಮಾಜಿ ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಎಸ್ಡಿಪಿಐ ಕೆಟ್ಟ ಕೆಲಸ ಮಾಡಿದ್ರೆ ಕ್ರಮ ಕೈಗೊಳ್ಳಲಿ: ವೈ.ಎಸ್.ವಿ. ದತ್ತ - ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಎಸ್ಡಿಪಿಐ ಪಾತ್ರ
ಬೆಂಗಳೂರಿನ ಗಲಭೆ ಪ್ರಕರಣದಲ್ಲಿ ಎಸ್ಡಿಪಿಐ ಪಾತ್ರ ಹಾಗೂ ಎಸ್ಡಿಪಿಐ ಸಂಘಟನೆ ನಿಷೇಧ ವಿಚಾರವಾಗಿ ಮಾಜಿ ಶಾಸಕ ವೈ.ಎಸ್.ವಿ. ದತ್ತ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ವೈ.ಎಸ್.ವಿ. ದತ್ತ
ಗಲಭೆ ಪ್ರಕರಣ ಕುರಿತು ಮಾತನಾಡಿದ ಅವರು, ಎಸ್ಡಿಪಿಐ ಸಂಘಟನೆ ಕೆಟ್ಟ ಕೆಲಸ ಮಾಡಿದೆ ಎಂದಾದರೆ, ಕೂಡಲೇ ಸರ್ಕಾರ ಕಟ್ಟು ನಿಟ್ಟಿನ ತೀರ್ಮಾನ ಮಾಡಬೇಕು. ಸರ್ಕಾರ ಸುಮ್ಮನೆ ಬಾಯಲ್ಲಿ ಹೇಳಬಾರದು ಎಂದರು.
ಯಾವತ್ತೂ ಕೂಡ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬ ತಂತ್ರ ಅನುಸರಿಸಬಾರದು. ತೀರ್ಮಾನ ತೆಗೆದುಕೊಂಡರೆ ಅದು ಖಡಕ್ ಆಗಿರಬೇಕು. ಕೂಡಲೇ ತೀರ್ಮಾನ ಬರಬೇಕು ಎಂದರು.