ಚಿಕ್ಕಮಗಳೂರು :'ಯಾರೇ ನೀನು ರೋಜಾ ಹೂವೇ' ಹಾಡಿಗೆ ಮಾಜಿ ಶಾಸಕರು ಸಖತ್ ಸ್ಟೆಪ್ ಹಾಕಿದ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ತರೀಕೆರೆ ಮಾಜಿ ಶಾಸಕ ಶ್ರೀನಿವಾಸ್ ಅವರು ಕೋವಿಡ್ ಕೇರ್ ಸೆಂಟರ್ನಲ್ಲಿ ಟಪ್ಪಾಂಗುಚ್ಚಿ ಸ್ಟೆಪ್ಸ್ ಹಾಕಿ, ಸೋಂಕಿತರನ್ನು ರಂಜಿಸಿದ್ದಾರೆ. ಕೋವಿಡ್ ಕೇರ್ ಸೆಂಟರ್ನಲ್ಲಿ ಆಯೋಜಿಸಿದ್ದ ಸಂಗೀತ ಸಂಜೆ ಕಾರ್ಯಕ್ರಮ ಇವರು ಡ್ಯಾನ್ಸ್ ಮಾಡಿದ್ದು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸೀತಾರಾಮ್ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು.
'ಯಾರೇ ನೀನು ರೋಜಾ ಹೂವೇ' ಹಾಡನ್ನು ಬಿಡದ ನಾಯಕರು.. ರೇಣುಕಾಚಾರ್ಯ ಬಳಿಕ ಶ್ರೀನಿವಾಸ್ ಸಖತ್ ಸ್ಟೆಪ್
ಸೋಂಕಿತರ ಜೊತೆ ಡ್ಯಾನ್ಸ್, ಊಟ ಮಾಡಿದ ಮಾಜಿ ಶಾಸಕ ಶ್ರೀನಿವಾಸ್ ಅವರಿಗೆ ಧೈರ್ಯ ತುಂಬಿದ್ದಾರೆ. ಮಾಜಿ ಶಾಸಕರಿಗೆ ಗ್ರಾಮ ಪಂಚಾಯತ್ ಸದಸ್ಯರು, ಆರೋಗ್ಯ ಸಿಬ್ಬಂದಿ ಸಾಥ್ ನೀಡಿದ್ದಾರೆ..
‘ಯಾರೇ ನೀನು ರೋಜಾ ಹೂವೆ’ ಹಾಡಿಗೆ ಹೆಜ್ಜೆ ಹಾಕಿದ ಮಾಜಿ ಶಾಸಕ ಶ್ರೀನಿವಾಸ್
ಸೋಂಕಿತರ ಜೊತೆ ಡ್ಯಾನ್ಸ್, ಊಟ ಮಾಡಿದ ಮಾಜಿ ಶಾಸಕ ಶ್ರೀನಿವಾಸ್ ಅವರಿಗೆ ಧೈರ್ಯ ತುಂಬಿದ್ದಾರೆ. ಮಾಜಿ ಶಾಸಕರಿಗೆ ಗ್ರಾಮ ಪಂಚಾಯತ್ ಸದಸ್ಯರು, ಆರೋಗ್ಯ ಸಿಬ್ಬಂದಿ ಸಾಥ್ ನೀಡಿದ್ದಾರೆ.
ಓದಿ:ಸೋಂಕಿತರಿಗೆ ಧೈರ್ಯ ತುಂಬಲು ಕೋವಿಡ್ ಕೇರ್ ಸೆಂಟರ್ನಲ್ಲೇ ರೇಣುಕಾಚಾರ್ಯ ವಾಸ್ತವ್ಯ