ETV Bharat Karnataka

ಕರ್ನಾಟಕ

karnataka

ETV Bharat / state

ಚುನಾವಣಾ ಫಲಿತಾಂಶ ಬಂದ ಮೇಲೆ ಯಾರು ಭ್ರಷ್ಟರು ಎಂದು ತಿಳಿಯುತ್ತೆ: ಯಡಿಯೂರಪ್ಪ - ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕರ ಮಾತಿನ ಬಗ್ಗೆ ನಾನು ಹಗುರವಾಗಿ ಮಾತನಾಡಲ್ಲ. ಚುನಾವಣಾ ಫಲಿತಾಂಶ ಬಂದ್ಮೇಲೆ ಯಾರು ಭ್ರಷ್ಟರು ಅಂತಾ ಗೊತ್ತಾಗುತ್ತದೆ. ಫಲಿತಾಂಶ ಬರುವ ತನಕ ಸಿದ್ದರಾಮಯ್ಯ ಕಾಯಲಿ ಎಂದು ಬಿಎಸ್​ವೈ ತಿರುಗೇಟು ಕೊಟ್ಟರು.

ಬಿ ಎಸ್ ಯಡಿಯೂರಪ್ಪ
ಬಿ ಎಸ್ ಯಡಿಯೂರಪ್ಪ
author img

By

Published : Dec 3, 2021, 8:14 PM IST

ಚಿಕ್ಕಮಗಳೂರು : ರಾಜ್ಯದಲ್ಲಿ ಎರಡು ಒಮಿಕ್ರಾನ್ ಕೇಸ್ ಬೆಳಕಿಗೆ ಬಂದಿವೆ, ಯಾವುದೇ ಕಾರಣಕ್ಕೂ ಜನರು ಗಾಬರಿಯಾಗಬಾರದು. ಧೈರ್ಯದಿಂದ ಇರಿ. ಈಗಾಗಲೇ ಸರ್ಕಾರ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಇದು ಹರಡದಂತೆ ಎಚ್ಚರ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಿ ಎಸ್ ಯಡಿಯೂರಪ್ಪ ಹೇಳಿಕೆ

ಕಡೂರು ನಗರದಲ್ಲಿ ಬಿಜೆಪಿಯ ವಿಧಾನ ಪರಿಷತ್ ಅಭ್ಯರ್ಥಿ ಪರ ಪ್ರಚಾರ ವೇಳೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯಲ್ಲಿ 15 ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ಭ್ರಷ್ಟ ಜನತಾ ಪಾರ್ಟಿ ಅನ್ನೋ ಸಿದ್ದರಾಮಯ್ಯ ಮಾತಿಗೆ ನಾನು ಪ್ರತಿಕ್ರಿಯೆ ನೀಡಲ್ಲ. ವಿರೋಧ ಪಕ್ಷದ ನಾಯಕರ ಮಾತಿಗೆ ನಾನು ಹಗುರವಾಗಿ ಮಾತನಾಡಲ್ಲ. ಚುನಾವಣಾ ಫಲಿತಾಂಶ ಬಂದ್ಮೇಲೆ ಯಾರು ಭ್ರಷ್ಟರು ಅಂತಾ ಗೊತ್ತಾಗುತ್ತದೆ. ಫಲಿತಾಂಶ ಬರುವ ತನಕ ಸಿದ್ದರಾಮಯ್ಯ ಕಾಯಲಿ ಎಂದು ತಿರುಗೇಟು ಕೊಟ್ಟರು.

ಇದನ್ನೂ ಓದಿ : ಪರಿಷತ್ ಚುನಾವಣೆ ನಂತರ ಸಂಪುಟ ಪುನಾರಚನೆ.. ಬಿ ವೈ ವಿಜಯೇಂದ್ರಗೆ ಬೊಮ್ಮಾಯಿ ಸಂಪುಟದಲ್ಲಿ ಸ್ಥಾನ!?

ABOUT THE AUTHOR

...view details