ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ತಲಾ ಒಂದು ಚಿರತೆ ಹಾಗೂ ಜಿಂಕೆ ಚರ್ಮ ವಶಕ್ಕೆ ಪಡೆಯಲಾಗಿದೆ.

forest-officials-seized-leopard-and-deer-skin-in-chikkamagaluru
ಚಿಕ್ಕಮಗಳೂರು: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

By ETV Bharat Karnataka Team

Published : Oct 27, 2023, 11:01 PM IST

Updated : Oct 28, 2023, 7:02 PM IST

ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು

ಚಿಕ್ಕಮಗಳೂರು:ಇಲ್ಲಿನ ಬಾಬಾ ಬುಡನ್​​ಗಿರಿ ದರ್ಗಾ ಶಾಖಾದ್ರಿ ಅವರ ಮನೆ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿ ತಲಾ ಒಂದು ಚಿರತೆ ಹಾಗೂ ಜಿಂಕೆ ಚರ್ಮ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ ಎಂದು ಎಸಿಎಫ್​ ಮೋಹನ್​ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ನಗರದ ಮಾರ್ಕೆಟ್ ರಸ್ತೆಯಲ್ಲಿನ ಶಾಖಾದ್ರಿ ಗೌಸ್​ ಮೋಯಿದ್ದೀನ್​ ಅವರ ಮನೆಯಲ್ಲಿ ಅಧಿಕಾರಿಗಳು ಶುಕ್ರವಾರ ಪರಿಶೀಲನೆ ಕೈಗೊಂಡಿದ್ದರು. ಆದರೆ, ಈ ವೇಳೆ ಶಾಖಾದ್ರಿ ಮನೆಯಲ್ಲಿ ಇರಲಿಲ್ಲ. ಮನೆಯ ಬಾಗಿಲು ಲಾಕ್​ ಆಗಿದ್ದ ಕಾರಣ 10 ಗಂಟೆಗೂ ಅಧಿಕ ಕಾಲ ಕಾದು ಕುಳಿತ ಅಧಿಕಾರಿಗಳು ಸಂಬಂಧಿಕರೊಬ್ಬರ ಮೂಲಕ ಮನೆಯ ಕೀ ತರಿಸಿಕೊಂಡಿದ್ದರು. ಬೆಂಗಳೂರಿನಿಂದ ಬಂದ ಬಸ್​ನಲ್ಲಿ ಕೀ ತರಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಬಗ್ಗೆ ವನ್ಯಜೀವಿ (ರಕ್ಷಣೆ) ಕಾಯಿದೆ ಅಡಿ ಪ್ರಕರಣ ದಾಖಲಾಗಿದೆ.

ದಾಳಿ ವೇಳೆ ಸಿಕ್ಕ ಚಿರತೆ, ಜಿಂಕೆಯ ಚರ್ಮ

ಮನೆಯ ಕೀ ಬಂದ ಬಳಿಕ ಶಾಖಾದ್ರಿ ಅನುಪಸ್ಥಿತಿಯಲ್ಲಿ, ಅವರ ಸಂಬಂಧಿಕರ ಸಮ್ಮುಖದಲ್ಲಿ ಮನೆ ತಪಾಸಣೆ ನಡೆಸಲಾಗಿದೆ. ಈ ವೇಳೆ ಮನೆಯಲ್ಲಿ ಒಂದು ಚಿರತೆ ಹಾಗೂ ಒಂದು ಜಿಂಕೆ ಚರ್ಮ ಪತ್ತೆಯಾಗಿದೆ. ಎರಡು ಪ್ರಾಣಿಯ ಚರ್ಮವನ್ನು ವಶಕ್ಕೆ ಪಡೆದಿದ್ದು, ಎಫ್.ಎಸ್.ಎಲ್. ವರದಿಗೆ ಚರ್ಮವನ್ನು ಕಳುಹಿಸಲಾಗುವುದು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡುತ್ತೇವೆ. ಬಳಿಕ ಮುಂದಿನ ತನಿಖೆ ಕೈಗೊಳ್ಳಲಾಗುವುದು. ಅವರ ಮನೆಯಲ್ಲಿ ಯಾವುದೇ ರೀತಿಯ ಹುಲಿ ಚರ್ಮ ದೊರಕಿಲ್ಲ ಎಂದು ಎಸಿಎಫ್​ ಮೋಹನ್​ ತಿಳಿಸಿದ್ದಾರೆ.

ಚಿಕ್ಕಮಗಳೂರು ಆರ್​​ಎಫ್​ಒ ಮೋಹನ್ ಅವರ ನೇತೃತ್ವದ ತಂಡದಿಂದ ಕಾರ್ಯಾಚರಣೆ ನಡೆದಿದೆ. ಎಲ್ಲದರ ಬಗ್ಗೆ ನಾವು ವಿಚಾರಣೆ ಮಾಡುತ್ತೇವೆ ಎಂದು ಅಧಿಕಾರಿ ತಿಳಿಸಿದರು.

ಇದನ್ನೂ ಓದಿ:ಲಕ್ಷ್ಮಣ್ ಸವದಿ ನಿವಾಸದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಶೋಧ; ಹುಲಿ ಉಗುರು ಮಾದರಿಯ ಪೆಂಡೆಂಟ್‌ ವಶಕ್ಕೆ

Last Updated : Oct 28, 2023, 7:02 PM IST

ABOUT THE AUTHOR

...view details