ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು: ಫಾರೆಸ್ಟ್‌ ಆಫೀಸ್ ಪುಡಿ ಪುಡಿ ಮಾಡಿದ ಜನರು - ಅರಣ್ಯ ಇಲಾಖೆ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ಜನರು ಕಳ್ಳ ಬೇಟೆ ನಿಗ್ರಹ ಶಿಬಿರವನ್ನು ಧ್ವಂಸ ಮಾಡಿರುವ ಘಟನೆ ನಡೆದಿದೆ.

ಫಾರೆಸ್ಟ್‌ ಆಫೀಸ್
ಫಾರೆಸ್ಟ್‌ ಆಫೀಸ್

By

Published : Nov 25, 2022, 8:35 PM IST

ಚಿಕ್ಕಮಗಳೂರು:ಆನೆ ದಾಳಿಯನ್ನು ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿ ಕಳ್ಳ ಬೇಟೆ ನಿಗ್ರಹ ಶಿಬಿರವನ್ನು ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

ಫಾರೆಸ್ಟ್‌ ಆಫೀಸ್ ಪುಡಿ ಪುಡಿ ಮಾಡಿದ ಜನರು

ಕೈಗೆ ಸಿಕ್ಕ, ಸಿಕ್ಕ ವಸ್ತುಗಳನ್ನೆಲ್ಲ ಆಕ್ರೋಶಿತರು ಪುಡಿ ಪುಡಿ ಮಾಡಿದ್ದು, ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷಾವೇಶ ತೋರಿಸಿದ್ದಾರೆ. ನಿಮಗೆ ಪಟಾಕಿ ಕೊಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಆನೆ ನಿಯಂತ್ರಿಸಕ್ಕೆ ಆಗಲ್ಲ, ತಿನ್ನೋಕೆ ಸೋನಾ ಮುಸುರಿ ಅಕ್ಕಿ ಬೇಕು ಎಂದು ಕಿಡಿಕಾರಿದ್ದಾರೆ.

ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಮುಖ ತೋರಿಸಿ.. ತೋರಿಸಿ ಎಂದು ಯುವಕರು ಕಿರುಚಾಡಿದ್ದಾರೆ. ನಿರಂತರ ಆನೆ ದಾಳಿಯಿಂದ ಮಲೆನಾಡು ಭಾಗದ ಜನರು ಕಂಗೆಟ್ಟಿದ್ದು, ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದರು. ಆದರೂ ಅರಣ್ಯ ಇಲಾಖೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ:ಚಿಕ್ಕಮಗಳೂರಲ್ಲಿ ಆನೆ ದಾಳಿಗೆ ಮಹಿಳೆ ಬಲಿ: ಗ್ರಾಮಸ್ಥರ ಆಕ್ರೋಶ

ABOUT THE AUTHOR

...view details