ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ ಫಾರೆಸ್ಟ್ ಗಾರ್ಡ್ ಮೃತಪಟ್ಟಿರುವ ಘಟನೆ ಇಲ್ಲಿನ ಅಲ್ದೂರು ಸಮೀಪದ ಗುಲ್ಲನ್ ಪೇಟೆ ಬಳಿ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಫಾರೆಸ್ಟ್ ಗಾರ್ಡ್ ಸಾವು - ಕಾಡಾನೆ ದಾಳಿ
ಕಾಡಾನೆಯನ್ನು ಓಡಿಸಲು 6 ಮಂದಿಯ ತಂಡ ತೆರಳಿತ್ತು. ಮಧ್ಯಾಹ್ನ ಕಾಡಾನೆ ಓಡಿಸುವ ಕಾರ್ಯಾಚರಣೆ ವೇಳೆ ಆನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಗಾರ್ಡ್ ಮೃತಪಟ್ಟಿದ್ದಾರೆ. ಮೂಡಿಗೆರೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
![ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಫಾರೆಸ್ಟ್ ಗಾರ್ಡ್ ಸಾವು Gaurd died](https://etvbharatimages.akamaized.net/etvbharat/prod-images/768-512-04:42:14:1620385934-kn-ckm-01-elephant-dalli-av-7202347-07052021163945-0705f-1620385785-903.jpg)
Gaurd died
ಪುಟ್ಟರಾಜು ಆನೆ ದಾಳಿಗೆ ಮೃತಪಟ್ಟ ಅರಣ್ಯ ಸಿಬ್ಬಂದಿಯಾಗಿದ್ದಾರೆ. ಇವರು ಬೆಳಗ್ಗೆ ಕಾಡಾನೆಯನ್ನು ಓಡಿಸಲು 6 ಮಂದಿಯ ತಂಡದೊಂದಿಗೆ ತೆರಳಿದ್ದರು. ಮಧ್ಯಾಹ್ನ ಕಾಡಾನೆ ಓಡಿಸುವ ಕಾರ್ಯಚರಣೆ ವೇಳೆ ಆನೆ ದಾಳಿ ಮಾಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡಿಗೆರೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.