ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆಗೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿಯನ್ನು ಸಂತ್ರಸ್ತರು ಕೆಲಕಾಲ ತರಾಟೆಗೆ ತೆಗೆದುಕೊಂಡರು.
ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿಯನ್ನು ತರಾಟೆಗೆ ತೆಗೆದುಕೊಂಡ ಪ್ರವಾಹ ಸಂತ್ರಸ್ತರು
2019ರಲ್ಲಿ ಮಹಾಮಳೆಯಿಂದ ಮನೆ, ಆಸ್ತಿಯನ್ನು ಕಳೆದುಕೊಂಡಿದ್ದ ಸಂತ್ರಸ್ತರಿಗೆ ಮೂರು ವರ್ಷವಾದರೂ ಮನೆಕಟ್ಟಿ ಕೊಟ್ಟದ ಹಿನ್ನೆಲೆ ಇಂದು ಸಂತ್ರಸ್ತರು ಉಸ್ತುವಾರಿ ಸಚಿವ ಅಂಗಾರ, ಶಾಸಕ ಎಂ.ಪಿ ಕುಮಾರಸ್ವಾಮಿಗೆ ಕ್ಲಾಸ್ ತೆಗೆದುಕೊಂಡರು.
2019 ರಲ್ಲಿ ಬಂದ ಮಹಾಮಳೆಯಿಂದ ಮನೆ, ಆಸ್ತಿಯನ್ನು ಈ ಭಾಗದ ಕೆಲ ಜನ ಕಳೆದುಕೊಂಡಿದ್ದರು. 5 ಮನೆಗಳು, 40 ಎಕರೆ ಜಮೀನು ನೀರಿನಲ್ಲಿ ಸಂಪೂರ್ಣವಾಗಿ ಕೊಚ್ಚಿ ಹೋಗಿತ್ತು. ಪ್ರವಾಹದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂತ್ರಸ್ತರಿಗೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದರು. ಆದರೆ ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆ ಈ ಭಾಗದ ಜನರು ಜನನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಮೂರು ವರ್ಷಗಳು ಕಳೆದರೂ ಇನ್ನೂ ಮನೆ ಕಟ್ಟಿ ಕೊಟ್ಟಿಲ್ಲ. ನಿಮ್ಮಿಂದ ಆಗುವುದಿಲ್ಲ ಅಂದ್ರೆ ಹೇಳಿ, ಭಿಕ್ಷೆ ಬೇಡಿ ಬದುಕುತ್ತೇವೆ ಎಂದು ಶಾಸಕರಿಗೆ ಕ್ಲಾಸ್ ತೆಗೆದುಕೊಂಡರು.