ಕರ್ನಾಟಕ

karnataka

ETV Bharat / state

ಹಿರೇಬೈಲು ಗ್ರಾಮದಲ್ಲಿ ಗುಡ್ಡ ಕುಸಿತ : ಸಹಾಯದ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು - Mudigere

ಗುಡ್ಡ ಕುಸಿತದಿಂದಾಗಿ ಸರ್ವವನ್ನೂ ಕಳೆದುಕೊಂಡ ಜನರು ಒಂದೆಡೆಯಾದರೆ, ತಮ್ಮ ಶಿಕ್ಷಣ ಅಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಸಹಾಯ ಹಸ್ತಕ್ಕೆ ಕೈ ಚಾಚಿದ್ದಾರೆ. ನಮ್ಮ ವಿದ್ಯಾಭ್ಯಾಸಕ್ಕೆ ನೇರವಾಗಿ ನಮ್ಮಗೆ ಹಣದ ಅವಶ್ಯಕತೆ ತುಂಬಾ ಇದೆ, ಪ್ರಯಾಣ ಮಾಡೋದಕ್ಕೆ ನಮ್ಮ ಬಳಿ ಹಣ ಇಲ್ಲ. ದಯಮಾಡಿ ನಮಗೆ ಸಹಾಯ ಮಾಡಿ ಎಂದು ನಿರಾಶ್ರಿತ ಕೇಂದ್ರದಲ್ಲಿರುವ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

ಸಹಾಯದ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು

By

Published : Aug 15, 2019, 3:06 PM IST

ಚಿಕ್ಕಮಗಳೂರು :ನಿರಂತರ ಮಳೆಯಿಂದಾಗಿ ಗುಡ್ಡ ಕುಸಿದು, ತೋಟಗಳು ಹಾಳಾಗಿ ನೂರಾರು ಜನರ ಬದುಕು ಬೀದಿಗೆ ಬಂದಿದೆ.

ಮೂಡಿಗೆರೆ ತಾಲೂಕಿನ ಕಳಸದ ಬಳಿ ಇರುವ ಹಿರೇಬೈಲು ಗ್ರಾಮದಲ್ಲಿ ಗುಡ್ಡ ಕುಸಿತ ಉಂಟಾಗಿ ನೂರಾರು ಜನರು ಮನೆ ಕಳೆದುಕೊಂಡಿದ್ದಾರೆ. ಇನ್ನು ವಿದ್ಯಾರ್ಥಿಗಳು ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದ್ದು ಇನ್ನಷ್ಟು ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಸಹಾಯದ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು

ಈಗಾಗಲೇ ತುಂಬಾ ಜನರು ಸಹಾಯ ಮಾಡಿದ್ದಾರೆ. ಇಲ್ಲಿ ಸಾಕಷ್ಟು ಜನರು ವಿದ್ಯಾರ್ಥಿಗಳಿದ್ದು, ಎಲ್ಲರ ವಿದ್ಯಾಭ್ಯಾಸ ಹಾಳಾಗುತ್ತಿದೆ. ನಮಗೆ ಹಣದ ಅವಶ್ಯಕತೆ ತುಂಬಾ ಇದೆ, ಪ್ರಯಾಣ ಮಾಡೋದಕ್ಕೆ ನಮ್ಮ ಬಳಿ ಹಣ ಇಲ್ಲ ದಯಮಾಡಿ ನಮಗೆ ಸಹಾಯ ಮಾಡಿ ಎಂದೂ ನಿರಾಶ್ರಿತ ಕೇಂದ್ರದಲ್ಲಿರುವ ವಿದ್ಯಾರ್ಥಿಗಳು ಮನವಿ ಮಾಡುತ್ತಿದ್ದಾರೆ.

ABOUT THE AUTHOR

...view details