ಚಿಕ್ಕಮಗಳೂರು: ತಾಲೂಕಿನ ಕಸ್ಕೆಮನೆ ಬಳಿಯ ಅರಣ್ಯದಲ್ಲಿ ಕಾಮಗಾರಿ ನಡೆಸಲು ನಿಲ್ಲಿಸಿದ್ದ ಹಿಟಾಚಿ ಯಂತ್ರಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದೆ.
ಅರಣ್ಯದಲ್ಲಿ ಕಾಮಗಾರಿ ನಡೆಸಲು ನಿಲ್ಲಿಸಿದ್ದ ಹಿಟಾಚಿ ಯಂತ್ರಕ್ಕೆ ಬೆಂಕಿ - ಅರಣ್ಯ
ಕಸ್ಕೆಮನೆ ಬಳಿಯ ಅರಣ್ಯದಲ್ಲಿ ಕಾಮಗಾರಿ ನಡೆಸಲು ನಿಲ್ಲಿಸಿದ್ದ ಹಿಟಾಚಿ ಯಂತ್ರಕ್ಕೆ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದ್ದು, ನಿಖರವಾದ ಕಾರಣ ತಿಳಿದು ಬಂದಿಲ್ಲ.
ಕಸ್ಕೆಮನೆ ಬಳಿ ಅರಣ್ಯ ಇಲಾಖೆ ವತಿಯಿಂದ ಟ್ರಂಚ್ ಹೊಡೆಯುವ ಕಾಮಗಾರಿ ನಡೆಯುತ್ತಿತ್ತು. ಗುತ್ತಿಗೆದಾರರು ಕಾಮಗಾರಿ ಮುಗಿಸಿ ಕಾಡಿನಲ್ಲೇ ಹಿಟಾಚಿ ನಿಲ್ಲಿಸಿ ವಾಪಾಸ್ಸಾಗಿದ್ದರು. ಮತ್ತೆ ಕಾಮಗಾರಿ ಮುಂದುವರೆಸಲು ಸ್ಥಳಕ್ಕೆ ತೆರಳಿದಾಗ ಯಂತ್ರ ಬೆಂಕಿಗೆ ಆಹುತಿಯಾಗಿರುವುದು ಕಂಡು ಬಂದಿದೆ. ಆದರೆ ಹಿಟಾಚಿಗೆ ಬೆಂಕಿ ತಗುಲಲು ನಿಖರವಾದ ಕಾರಣ ತಿಳಿದು ಬಂದಿಲ್ಲ.
ಈ ಕುರಿತು ಗುತ್ತಿಗೆದಾರ ಗಿರೀಶ್ ದೂರು ನೀಡಿದ್ದು, ಬಾಳೆಹೊನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಹಿಟಾಚಿಗೆ ಯಾಂತ್ರಿಕ ದೋಷದಿಂದ ಬೆಂಕಿ ತಗುಲಿದೆಯಾ ಅಥವಾ ಕಿಡಿಗೇಡಿಗಳ ಕೃತ್ಯದಿಂದ ಈ ಘಟನೆ ನಡೆದಿದೆಯಾ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.