ಚಿಕ್ಕಮಗಳೂರು:ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯ ಫೈಟ್ ಇನ್ನು ಮುಗಿದಿಲ್ಲ ಎಂಬಂತೆ ಕಾಣುತ್ತಿದೆ. ಈ ಹಿನ್ನೆಲೆ ದನದ ಕೊಟ್ಟಿಗೆಗೆ ಬೆಂಕಿ ಹಾಕಿ ಜಾನುವಾರುಗಳ ಸಜೀವ ದಹನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಜಾವೂರು ಹೊಸಳ್ಳಿ ಗ್ರಾಮದಲ್ಲಿ ಚಂದ್ರಪ್ಪ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ಯಾರೋ ಬೆಂಕಿ ಹಾಕಿದ್ದಾರೆ. ಇದರಿಂದ 2 ರಾಸುಗಳು ಸಜೀವ ದಹನವಾಗಿದ್ದು, ಸುಟ್ಟ ಗಾಯದಿಂದ 5 ಜಾನುವಾರು ನರಳಾಟ ನಡೆಸುತ್ತಿವೆ. ಜನರ ದ್ವೇಷಕ್ಕೆ ಮೂಕ ಪ್ರಾಣಿಗಳು ಮೂಕ ರೋಧನೆ ಅನುಭವಿಸುವಂತಾಗಿದೆ.