ಚಿಕ್ಕಮಗಳೂರು:ಬೆಳವಾಡಿ ಕೆರೆಯಲ್ಲಿ ಶಾಸಕ ಸಿ. ಟಿ ರವಿಯಿಂದ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾರಾಮಾರಿ ಆಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಾಸಕ ಸಿ. ಟಿ ರವಿ ಹೆಸರಿನಲ್ಲಿ ಬ್ಯಾನರ್ ಹಾಕಿದ್ದಕ್ಕೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಸ್ಥಳೀಯರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಆಗಿದೆ.
ಸಿ ಟಿ ರವಿ ಬಾಗಿನ ಅರ್ಪಿಸಿದ ಕಾರ್ಯಕ್ರಮದಲ್ಲಿ ಮಾರಾಮಾರಿ ಸ್ಥಳೀಯರ ಮೇಲೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವಿ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದ್ದು, ಪೊಲೀಸ್ ವಾಹನದಲ್ಲಿ ಕುಳಿತವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಆಧುನಿಕ ಭಗೀರಥ ಸಿ. ಟಿ ರವಿ ಎಂದು ಬ್ಯಾನರ್ ಅನ್ನು ಬಿಜೆಪಿ ಕಾರ್ಯಕರ್ತರು ಹಾಕಿದ್ದರು. ಇದಕ್ಕೆ ಸ್ಥಳೀಯ ಕೆಲ ಯುವಕರು ವಿರೋಧ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೇಳೆ ಇಬ್ಬರು ಯುವಕರು ಬಿಜೆಪಿ ಕಾರ್ಯಕರ್ತರ ಮೇಲೆ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆದಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಓದಿ:ಹೆಣ ಹೂಳಲೂ ಜಿಎಸ್‌ಟಿ ಕಟ್ಟಬೇಕು ಎಂದರೆ ಇದೆಂಥಾ ನ್ಯಾಯ ರೀ ಸರ್ಕಾರದ್ದು?: ಡಿಕೆಶಿ ಪ್ರಶ್ನೆ