ಚಿಕ್ಕಮಗಳೂರು : ಕಾಫಿ ಬೆಳೆಗಾರರಿಗೆ ಬಾಕಿ ಹಣ ಉಳಿಸಿಕೊಂಡಿರುವ ಆರೋಪದಡಿ ಸಿದ್ಧಾರ್ಥ್ ಹೆಗ್ಡೆ ಅವರ ಪತ್ನಿ ಮಾಳವಿಕ ಸಿದ್ಧಾರ್ಥ್ ವಿರುದ್ಧ ಜಿಲ್ಲೆಯ ಮೂಡಿಗೆರೆ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.
ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಪತ್ನಿಗೆ ಬಂಧನದ ಭೀತಿ - coffee day owner Siddharth Hegde wife news
ಸಿದ್ಧಾರ್ಥ್ ಹೆಗ್ಡೆ ಅವರ ಪತ್ನಿ ಮಾಳವಿಕ ಸಿದ್ದಾರ್ಥ್ ಸೇರಿ 8 ಜನರಿಗೆ ಬಂಧನದ ಭೀತಿ ಎದುರಾಗಿದ್ದು, ಜಿಲ್ಲೆಯ ಮೂಡಿಗೆರೆ ಜೆ.ಎಂ.ಎಫ್.ಸಿ ನ್ಯಾಯಾಲಯದಿಂದ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿದೆ.
ಸಿದ್ಧಾರ್ಥ್ ಹೆಗಡೆ ಪತ್ನಿ
ಕಾಫಿ ಡೇ ಕಂಪನಿಗೆ ಕಾಫಿ ಕೊಟ್ಟ 300ಕ್ಕೂ ಹೆಚ್ಚು ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಕಾಫಿ ಬೆಳೆಗಾರರು ಪ್ರಕರಣ ದಾಖಲು ಮಾಡಿದ್ದರು. ಈ ಸಂಬಂಧ ಮೂಡಿಗೆರೆ ಕೋರ್ಟ್ನಿಂದ ಸಿದ್ಧಾರ್ಥ್ ಹೆಗ್ಡೆ ಅವರ ಪತ್ನಿ ಮಾಳವಿಕ ಸಿದ್ಧಾರ್ಥ್ ಸೇರಿದಂತೆ 8 ಜನರಿಗೆ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.
ಕಾಫಿ ಬೆಳಗಾರರಿಗೆ ಕಂಪನಿ ವತಿಯಿಂದ ನೀಡಿದಂತಹ ಚೆಕ್ ಬೌನ್ಸ್ ಆಗಿದೆ ಎಂದು ಕಾಫಿ ಬೆಳೆಗಾರರು ಪ್ರಕರಣ ದಾಖಲು ಮಾಡಿದ್ದರು.
Last Updated : Nov 4, 2020, 9:03 PM IST