ಕರ್ನಾಟಕ

karnataka

ETV Bharat / state

ನೀರಿಗಾಗಿ ಮಚ್ಚಿನಿಂದ ಹಲ್ಲೆ: ವ್ಯಕ್ತಿಗೆ ಗಂಭೀರ ಗಾಯ - ಮಾರಣಾಂತಿಕ ಹಲ್ಲೆ

ಕುಡಿವ ನೀರಿಗಾಗಿ ಶುರುವಾದ ಜಗಳ ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ. ತೀವ್ರ ಗಾಯವಾಗಿದ್ದ ನರಸಿಂಹಪ್ಪ ಅವರನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ

By

Published : Aug 29, 2019, 3:59 PM IST

ಚಿಕ್ಕಬಳ್ಳಾಪುರ: ಕುಡಿಯುವ ನೀರಿಗಾಗಿ ಜಗಳವಾಡಿಕೊಂಡು, ಮಚ್ಚಿನಿಂದ ಹಲ್ಲೆ ಮಾಡಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ತುಳುವನೂರಿನಲ್ಲಿ ನಡೆದಿದೆ. ನರಸಿಂಹಪ್ಪ (60) ಎಂಬಾತನೆ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಗ್ರಾಮದ ವಿಜಯ್ ಕುಮಾರ್ ಎಂಬಾತ ಹಲ್ಲೆ ಎಸಗಿದ ವ್ಯಕ್ತಿ ಎನ್ನಲಾಗಿದೆ.

ಹಲ್ಲೆಗೊಳಗಾದ ವ್ಯಕ್ತಿ

ನರಸಿಂಹಪ್ಪನ ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳಿಯ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಕೋಲಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details