ಚಿಕ್ಕಮಗಳೂರು :ರೈತರಿಗೆ ಮರಣ ಶಾಸನಗಳಾಗಿರುವ ಕೃಷಿ ಕಾಯ್ದೆಗಳನ್ನ ವಾಪಸ್ ಆಗ್ರಹಿಸಿ ಕಡೂರು ತಾಲೂಕಿನಲ್ಲಿ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸಚಿವ ವೈ ಎಸ್ ವಿ ದತ್ತಾ, ಹಿಂದೆ ರೈತರು ಗುಡುಗಿದ್ರೆ ಸರ್ಕಾರ ನಡುಗುತ್ತಿದ್ದ ಕಾಲ ಈಗಿಲ್ಲ. ರೈತರ ಪರ ಯಾರಿಗೂ ಅನುಕಂಪ-ಅಭಿಮಾನವಿಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೈತ ವಿರೋಧಿ ಕಾಯ್ದೆ ವಿರೋಧಿಸಿ ಕಡೂರು ತಾಲೂಕಿನ 9 ಮೈಲಿಕಲ್ಲಿನಲ್ಲಿ ಪ್ರತಿಭಟನೆ ನಡೆಸಿದ್ದು, ರೈತರನ್ನು ಅಸ್ತಿಪಂಜರವನ್ನಾಗಿಸಿ, ಕಾರ್ಪೊರೇಟ್ ಸಂಸ್ಕೃತಿಗೆ ಎಲ್ಲ ನೀಡುವುದೇ ಈ ಕಾಯ್ದೆಗಳ ಸಾಧನೆ.
ಎಪಿಎಂಸಿ ಕಣ್ಮುಚ್ಚುತ್ತದೆ. ಮುಂದೆ ರೈತರಿಗೆ ಬೆಂಬಲ ಬೆಲೆ ತಪ್ಪಿಹೋಗುತ್ತದೆ. ಸರ್ಕಾರಿ ನ್ಯಾಯಬೆಲೆ ಅಂಗಡಿಗಳು ಮುಚ್ಚಿಹೋಗುತ್ತವೆ. ಬಂಡವಾಳಶಾಹಿಗಳ ಕಪಿಮುಷ್ಟಿಗೆ ರೈತರು ಸಿಲುಕುತ್ತಾರೆ. ನೂರಾರು ಎಕರೆ ಇದ್ದ ರೈತರು ಕೂಲಿ ಕಾರ್ಮಿಕರಾಗುತ್ತಾರೆ. ಭೂ ರಹಿತರ ಪಾಡೇನೆಂಬುದು ಊಹಿಸಲೂ ಆಗದು ಎಂದು ಆತಂಕ ವ್ಯಕ್ತಪಡಿಸಿದರು.