ಚಿಕ್ಕಮಗಳೂರು: ಕೊರೊನಾ ವೈರಸ್ನ ಹೊಡೆತಕ್ಕೆ ಚಿಕ್ಕಮಗಳೂರಿನ ಕೆಲ ರೈತರು ಬೀದಿಗೆ ಬೀಳುವಂತಾಗಿದೆ.
ಕೊರೊನಾ ವೈರಸ್ನ ಹೊಡೆತಕ್ಕೆ ಕಾಫಿನಾಡಿನ ರೈತರು ಕಂಗಾಲು
ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗಿದ್ದು, ಮಾರುಕಟ್ಟೆಗೆ ಸಾಗಿಸಲಾಗಿದೇ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
ಕೊರೊನಾ ವೈರಸ್ನ ಹೊಡೆತಕ್ಕೆ ಕಾಫಿನಾಡಿನಲ್ಲಿ ರೈತರು ಕಂಗಾಲು
ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸಾಗಿಸಲಾಗದೇ ರೈತರು ಕಣ್ಣೀರು ಹಾಕುತ್ತಿದ್ದು, ಕೋಸು ಸಾಗಿಸಲಾಗದೇ ಹೊಲದಲ್ಲೇ ಭಕ್ತರಹಳ್ಳಿಯ ರೈತನೊಬ್ಬ ಕಣ್ಣೀರು ಹಾಕಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹೊಲದಲ್ಲೇ ಸುಮಾರು ಎರಡು ಎಕರೆಯಲ್ಲಿ ಬೆಳೆದ ಕೋಸು ಕೊಳೆತು ಹೋಗುತ್ತಿದೆ. ಮಾರುಕಟ್ಟೆಗೆ ಸಾಗಿಸಲಾಗಿದೆ ಕೋಸು ಮಣ್ಣುಪಾಲು ಆಗುತ್ತಿದ್ದು, ಲಾಭದ ನಿರೀಕ್ಷೆಯಲ್ಲಿದ್ದ ರೈತರ ಮುಖದಲ್ಲಿ ಈಗ ನೋವು ಹಾಗೂ ಅಸಹಾಯಕತೆ ಕಾಣಿಸುತ್ತಿದೆ.
TAGGED:
Chikkamagaluru District news