ಕರ್ನಾಟಕ

karnataka

ETV Bharat / state

ಬಂದೂಕಿನಿಂದ ಗುಂಡು ಹಾರಿಸಿಕೊಂಡು ರೈತ ಆತ್ಮಹತ್ಯೆ - farmer suicide in chikkamagaluru

ಸಾಲ ತೀರಿಸಲಾಗದೆ ರೈತನೊಬ್ಬ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

shrigeri police station
ಶೃಂಗೇರಿ ಪೊಲೀಸ್​ ಠಾಣೆ

By

Published : Jun 7, 2020, 7:18 AM IST

ಚಿಕ್ಕಮಗಳೂರು: ಸಾಲ ತೀರಿಸಲಾಗದೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶೃಂಗೇರಿಯ ನೆಮ್ಮಾರ್ ಸಮೀಪದ ಮದ್ಲೆಬೈಲು ಗ್ರಾಮದಲ್ಲಿ ನಡೆದಿದೆ.

ಶಿವಪ್ಪ ನಾಯಕ, ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ಮೂಡಿಗೆರೆ ತಾಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಕೆರೆಕಟ್ಟೆಯಲ್ಲಿ ಜೀವನ ಸಾಗಿಸುತ್ತಿದ್ದರು. ನಂತರ ಸರ್ಕಾರದ ಪುನರ್ವಸತಿ ಯೋಜನೆಯಡಿ ಮದ್ಲೆಬೈಲಿನಲ್ಲಿ ಮೂರು ಎಕರೆ ಜಾಗವನ್ನು ಖರೀದಿಸಿ ಹೆಂಡತಿ, ಮಕ್ಕಳ ಜೊತೆ ಕೃಷಿ ಮಾಡುತ್ತಿದ್ದರು.

ಸಹಕಾರಿ ಬ್ಯಾಂಕ್ , ರಾಷ್ಟ್ರೀಯ ಬ್ಯಾಂಕ್​​ನಲ್ಲಿ ಲಕ್ಷಾಂತರ ಹಣವನ್ನು ವ್ಯವಸಾಯ ಮಾಡಲು ಸಾಲ ಪಡೆದಿದ್ದ. ಸಾಲ ಮರುಪಾವತಿ ಮಾಡಲಾಗದೇ ತಮ್ಮ ತೋಟದಲ್ಲಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details