ಬಳ್ಳಾರಿ:ಜಿಲ್ಲೆಯ ಸಂಡೂರು ತಾಲೂಕಿನ ಲಿಂಗದಹಳ್ಳಿ ಕೆರೆ ಕುಂಟೆಯಲ್ಲಿ ರೈತನ ಶವವೊಂದು ಪತ್ತೆಯಾಗಿದೆ.
ಲಿಂಗದಹಳ್ಳಿ ಕೆರೆಕುಂಟೆಯಲ್ಲಿ ತೇಲಿ ಬಂದ ರೈತನ ಶವ! - died body found in lingadahalli at bellary
ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಲಿಂಗದಹಳ್ಳಿ ಕೆರೆಕುಂಟೆಯಲ್ಲಿ ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ರೈತ ಹನುಮಂತರೆಡ್ಡಿ ಮೃತ ದೇಹ ಪತ್ತೆಯಾಗಿದೆ.
ರೈತ ಹನುಮಂತರೆಡ್ಡಿ
ಲಿಂಗದಹಳ್ಳಿ ಗ್ರಾಮದ ನಿವಾಸಿ ಹನುಮಂತರೆಡ್ಡಿ (21) ಎಂಬ ರೈತನ ಮೃತದೇಹ ಇದಾಗಿದ್ದು, ಎತ್ತುಗಳಿಗೆ ಕೆರೆಕುಂಟೆಯಲಿ ನೀರು ಕುಡಿಸಲು ತೆರಳಿದಾಗ ಅವಘಡ ಸಂಭವಿಸಿದ ಎನ್ನಲಾಗಿದೆ.
ಲಿಂಗದಹಳ್ಳಿ ಗ್ರಾಮ ಹೊರವಲಯದ ಈ ಕೆರೆಕುಂಟೆಯಲಿ, ಕಳೆದ ಎರಡ್ಮೂರು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ರೈತನಿಗಾಗಿ ಸತತವಾಗಿ ಹುಡುಕಾಟ ನಡೆಸಿದರೂ ಕೂಡ ಮೃತದೇಹ ಪತ್ತೆಯಾಗಿರಲಿಲ್ಲ.