ಕರ್ನಾಟಕ

karnataka

ETV Bharat / state

ಈರುಳ್ಳಿ ಬೆಲೆ ಕುಸಿತದಿಂದ ಕಂಗಾಲು.. ಕಲ್ಟಿವೇಟರ್​ ಮೂಲಕ​ ಬೆಳೆ ಮಣ್ಣುಪಾಲು ಮಾಡಿದ ರೈತ - ಈರುಳ್ಳಿ ಮಾರುಕಟ್ಟೆ

ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದ ಹಿನ್ನೆಲೆ ರೈತ ಬೆಳೆಯನ್ನ ನಾಶ ಮಾಡಿದ್ದಾನೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದ್ದು, ನೊಂದ ರೈತ ಬೆಳೆಯನ್ನು ಮಣ್ಣುಪಾಲು ಮಾಡಿದ್ದಾನೆ.

farmer-destroys-onion-crop-in-chikkamagalore
ಈರುಳ್ಳಿ ಬೆಲೆ ಕುಸಿತದಿಂದ ನೊಂದು ಟ್ರ್ಯಾಕ್ಟರ್ ಚಲಾಯಿಸಿ ರೈತನಿಂದ ಬೆಳೆ ನಾಶ

By

Published : Sep 22, 2021, 4:51 PM IST

ಚಿಕ್ಕಮಗಳೂರು: ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ಮನನೊಂದ ರೈತ ಕಲ್ಟಿವೇಟರ್​ ಹರಿಸಿ ನಾಶಪಡಿಸಿರುವ ಘಟನೆ ಜಿಲ್ಲೆಯ ಅಜ್ಜಂಪುರ ತಾಲೂಕಿನ‌ ಗೊಂಡದಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಈರುಳ್ಳಿ ಬೆಲೆ ಕುಸಿತದಿಂದ ನೊಂದು ಟ್ರ್ಯಾಕ್ಟರ್ ಚಲಾಯಿಸಿ ರೈತನಿಂದ ಬೆಳೆ ನಾಶ

2 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿಯನ್ನು ರೈತ ದೇವರಾಜ್​ ನಾಶಪಡಿಸಿ ಆಕ್ರೋಶ ಹೊರಹಾಕಿದ್ದಾನೆ. ಕಳೆದ ವರ್ಷ ಇದೇ ವೇಳೆ ಪ್ರತಿ ಕೆ.ಜಿಗೆ 100 ರೂಪಾಯಿವರೆಗೂ ಧಾರಣೆ ಇತ್ತು. ಆದರೆ ಈ ಬಾರಿ ಈರುಳ್ಳಿಯನ್ನ ಕೇಳುವರೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾನೆ.

2 ಎಕರೆ ಭೂಮಿಯಲ್ಲಿ 50 ಸಾವಿರ ರೂಪಾಯಿಗೂ ಹೆಚ್ಚು ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿಗೆ ಇದೀಗ 10 ಸಾವಿರ ಸಿಗುವುದು ಸಹ ಕಷ್ಟವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ:ಶುಂಠಿ ಬೆಲೆಯಲ್ಲಿ ದಿಢೀರ್ ಕುಸಿತ.. ಉತ್ತಮ ಇಳುವರಿ ಬಂದರೂ ಕಂಗಾಲಾದ ಕೊಡಗು ರೈತರು

ABOUT THE AUTHOR

...view details