ಚಿಕ್ಕಮಗಳೂರು: ಸಾಲಬಾಧೆ ಹಾಗೂ ಅತಿವೃಷ್ಟಿಯಿಂದ ಬೆಳೆ ನಷ್ಟವಾದ ಹಿನ್ನೆಲೆ ಮನನೊಂದ ರೈತನೋರ್ವ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಸಾಲಬಾಧೆ: ನದಿಗೆ ಹಾರಿ ರೈತ ಆತ್ಮಹತ್ಯೆ! - ಚಿಕ್ಕಮಗಳೂರು
ನದಿಗೆ ಹಾರಿ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ರಘು ಗೌಡ (55) ಆತ್ಮಹತ್ಯೆಗೆ ಶರಣಾದ ರೈತ.
ರಘು ಗೌಡ (55) ಆತ್ಮಹತ್ಯೆಗೆ ಶರಣಾದ ರೈತ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊಳೆಕೂಡಿಗೆ ಗ್ರಾಮದ ಪಕ್ಕದಲ್ಲಿ ಹರಿಯುವ ಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತ ರಘು ಗೌಡಗೆ 5 ಎಕರೆ ಕಾಫಿ ತೋಟವಿದ್ದು, ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಕಾಫಿ, ಅಡಿಕೆ, ಮೆಣಸು ಬೆಳೆ ಸಂಪೂರ್ಣ ನಾಶವಾಗಿತ್ತು. ಅಲ್ಲದೇ ಸ್ಥಳೀಯ ಬ್ಯಾಂಕ್ ಹಾಗೂ ಕೈ ಸಾಲ ಸೇರಿದಂತೆ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ. ಈ ಸಾಲದ ಬಗ್ಗೆ ಮನೆಯ ಸದಸ್ಯರಲ್ಲಿಯೂ ರಘು ಗೌಡ ಹೇಳಿಕೊಂಡಿದ್ದು, ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ.
ಸದ್ಯ ರಘು ಗೌಡ ಮೃತದೇಹವನ್ನು ಸ್ಥಳೀಯ ಈಜುಗಾರ ನಾಗರಾಜ್ ಹೊರ ತೆಗೆದಿದ್ದಾರೆ. ಮೂಡಿಗೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.