ಕರ್ನಾಟಕ

karnataka

ETV Bharat / state

ನಕಲಿ ಕರ್ಫ್ಯೂ ಪಾಸ್ ಮಾರಾಟ.. ತಾಯಿ-ಮಗನ ವಶಕ್ಕೆ ಪಡೆದ ಪೊಲೀಸರು

ಜಿಲ್ಲಾಡಳಿತ ನೀಡಿದ್ದ, ಕರ್ಫ್ಯೂ ಪಾಸ್, ವಾಹನಗಳ ಪಾಸ್​ಗಳನ್ನ ನಕಲು ಮಾಡಿ, ಪ್ರಿಂಟ್ ತೆಗೆದು 500,1000 ರೂಗಳಂತೆ ಮಾರಾಟ ಮಾಡುತ್ತಿದ್ದ ತಾಯಿ ಮಗನನ್ನ ಚಿಕ್ಕಮಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Fake Curfew Pass Sale..Mother-son police in custody
ನಕಲಿ ಕರ್ಫ್ಯೂ ಪಾಸ್ ಮಾರಾಟ..ತಾಯಿ-ಮಗನನ್ನ ವಶಕ್ಕೆ ಪಡೆದ ಪೊಲೀಸರು

By

Published : Apr 11, 2020, 5:53 PM IST

ಚಿಕ್ಕಮಗಳೂರು: ಸಾರ್ವಜನಿಕರಿಗೆ ಸೊಪ್ಪು, ತರಕಾರಿ ಮಾರಾಟ ಮಾಡದಂತೆ ಸರ್ಕಾರಿ ನಕಲಿ ಕರ್ಫ್ಯೂ ಪಾಸ್ ಸೇಲ್​ ಮಾಡುತ್ತಿದ್ದ ತಾಯಿ ಮಗನನ್ನ ಚಿಕ್ಕಮಗಳೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಕಲಿ ಕರ್ಫ್ಯೂ ಪಾಸ್ ಮಾರಾಟ..ತಾಯಿ-ಮಗನನ್ನ ವಶಕ್ಕೆ ಪಡೆದ ಪೊಲೀಸರು

ಜಿಲ್ಲಾಡಳಿತ ನೀಡಿದ್ದ, ಕರ್ಫ್ಯೂ ಪಾಸ್, ವಾಹನಗಳ ಪಾಸ್​ಗಳನ್ನ ನಕಲಿ ಮಾಡಿ, ಪ್ರಿಂಟ್ ತೆಗೆದು 500,1000 ರೂಗಳಂತೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿತ್ತು. ನಕಲಿ ಕರ್ಫ್ಯೂ ಪಾಸ್ ಮಾರಾಟ ಮಾಡುತ್ತಿದ್ದ ತಾಯಿ ಮಗನನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ. ಅಸ್ಲಾಂ ಪಾಷಾ (17) ಮತ್ತು ತಾಯಿ ಶಾಜಿದಾ ಬಾನು ಬಂಧಿತ ಆರೋಪಿಗಳು.

ಈಗಾಗಲೇ 100 ಕ್ಕೂ ಹೆಚ್ಚು ಪಾಸ್ ಮಾರಾಟ ಮಾಡಿದ್ದಾರೆ ಎಂದೂ ಹೇಳಲಾಗುತ್ತಿದ್ದು, ಈ ಕುರಿತು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ABOUT THE AUTHOR

...view details