ಕರ್ನಾಟಕ

karnataka

ETV Bharat / state

ದ್ವಿತೀಯ ಪಿಯುಸಿ ಪತ್ರಿಕೆಗಳ ಮೌಲ್ಯಮಾಪಕರಿಗೆ ತೊಂದರೆಯಾಗುತ್ತಿದೆ : ಬೋಜೇಗೌಡ - ದ್ವಿತೀಯ ಪಿಯುಸಿ ಮೌಲ್ಯಮಾಪನ

ದ್ವಿತೀಯ ಪಿಯುಸಿ ಪತ್ರಿಕೆ ಮೌಲ್ಯಮಾಪಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಮೌಲ್ಯಮಾಪನ ಕಾರ್ಯ ಮುಗಿಯಲು 40 ದಿನಗಳು ಆಗಬಹುದಾಗಿದ್ದು, ಅಷ್ಟು ದಿನಗಳ ಕಾಲ ಉಪನ್ಯಾಸಕರು ಉಳಿದುಕೊಳ್ಳಲು, ಲಾಡ್ಜ್ ಗಳ ವ್ಯವಸ್ಥೆ ಇಲ್ಲ ಎಂದು ಎಂಎಲ್​ಸಿ ಬೋಜೇಗೌಡ ತಿಳಿಸಿದ್ದಾರೆ.

Evaluators of PUC papers are bothering
ಪಿಯುಸಿ ಪತ್ರಿಕೆಗಳ ಮೌಲ್ಯಮಾಪಕರಿಗೆ ತೊಂದರೆಯಾಗುತ್ತಿದೆ : ಬೋಜೇಗೌಡ

By

Published : May 29, 2020, 8:26 PM IST

ಚಿಕ್ಕಮಗಳೂರು :ದ್ವಿತೀಯ ಪಿಯುಸಿ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಪ್ರಾರಂಭವಾಗಿದ್ದು, ಮೌಲ್ಯ ಮಾಪಕರು ಸರ್ಕಾರದ ಆದೇಶದಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಹೇಳಿದ್ದಾರೆ.

ಕೋವೀಡ್ 19ರ ಸಂಬಂಧ ಮೌಲ್ಯಮಾಪನ ಕಾರ್ಯಕ್ಕೆ ಕಡ್ಡಾಯ ಮಾಡದೆ, ಕೆಲವು ವಿನಾಯಿತಿಗಳನ್ನು ನೀಡಿರುವುದು ಸ್ವಾಗತರ್ಹ ಆಗಿದ್ದರೂ, ಇದರಿಂದ ಮೌಲ್ಯಮಾಪಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. ಮೌಲ್ಯಮಾಪನ ಕಾರ್ಯ ಮುಗಿಯಲು 40 ದಿನಗಳು ಆಗಬಹುದಾಗಿದ್ದು, ಅಷ್ಟು ದಿನಗಳು ಉಪನ್ಯಾಸಕರ ಉಳಿದುಕೊಳ್ಳಲು, ಲಾಡ್ಜ್​ಗಳ ವ್ಯವಸ್ಥೆ ಇಲ್ಲ.

ಊಟ ಮಾಡಲು ಹೋಟೆಲ್​ಗಳ ವ್ಯವಸ್ಥೆ ಇಲ್ಲ. ಹಾಗೂ ಮನೆಯಿಂದ ಹೊರಡಲು ಬಸ್​​ಗಳು, ಸಂಜೆ ಮೇಲೆ ಸಂಚಾರ ಮಾಡುವುದಿಲ್ಲ. ಇಷ್ಟೆಲ್ಲಾ ಒತ್ತಡದ ಮಧ್ಯೆ ಮೌಲ್ಯಮಾಪನದಲ್ಲಿ ವ್ಯತ್ಯಾಸವಾದರೆ ಪರೀಕ್ಷಾ ಮಂಡಳಿಯಿಂದ ತಲೆದಂಡ. ಹೀಗಾಗಿ ಉಪನ್ಯಾಸಕರುಗಳಿಗೆ ಒಂದು ಕಡೆ ಕೋವಿಡ್ ಭಯ, ಮತ್ತೊಂದು ಕಡೆ ಊಟ, ನಿದ್ರೆ ಇಲ್ಲದೆ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪ ಮಾಡಿದರು.

ನೈರುತ್ಯ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸುವ ನಾನು ನನ್ನ ಕ್ಷೇತ್ರದ ಹಿತ ಕಾಪಾಡುವುದು ನನ್ನ ಹೊಣೆ. ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಸರ್ಕಾರ ಕೆಲವು ವಿಧಾನ ಪರಿಷತ್​​ನ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದ ಸದಸ್ಯರುಗಳ ಜೊತೆ ಈ ಹಿಂದೆ ನಡೆದ ಸಭೆಯಲ್ಲಿ ಚರ್ಚಿಸಿದ್ದರು. ನಮ್ಮೆಲ್ಲರ ಸಲಹೆಗಳನ್ನು ಮತ್ತು ಅಭಿಪ್ರಾಯಗಳನ್ನು ಪರಿಗಣಿಸಿಲ್ಲ. ಮೌಲ್ಯಮಾಪನ ಕೇಂದ್ರಗಳನ್ನು ವಿಕೇಂದ್ರೀಕರಣಗೊಳಿಸುವುದು ಜಿಲ್ಲಾ ಕೇಂದ್ರಗಳಿಗೆ ಮೌಲ್ಯಮಾಪಕರು ಬಂದು ಹೋಗಲು ಕೇಂದ್ರಗಳಿಂದ ಇವರಿಗಾಗಿಯೇ ಪ್ರತ್ಯೇಕ ಬಸ್​ಗಳ ವ್ಯವಸ್ಥೆ ಮಾಡಬೇಕು.

ಎಂಎಲ್​ಸಿ ಬೋಜೇಗೌಡ

ಕಲಾ, ವಾಣಿಜ್ಯ, ಹಾಗೂ ಭಾಷಾ ಉತ್ತರ ಪತ್ರಿಕೆಗಳನ್ನು ಸಿಬಿಎಸ್​ಸಿ ಅವರ ಹಾಗೆಯೇ ವರ್ಕ್ ಫ್ರಮ್ ಹೋಮ್​​ನಂತೆ ತಾಲೂಕು ಕೇಂದ್ರಗಳಲ್ಲಿ, ಉತ್ತರ ಪತ್ರಿಕೆಗಳನ್ನು ಪ್ರತಿ ನಿತ್ಯ ಕೊಡುವ ಮತ್ತು ಪಡೆಯುವ ವ್ಯವಸ್ಥೆ ಮಾಡಿದರೆ ಮೌಲ್ಯಮಾಪಕರು ಯಾವುದೇ ಒತ್ತಡವಿಲ್ಲದೆ, ಮೌಲ್ಯಮಾಪನವನ್ನು ಸುಲಭವಾಗಿ ಮಾಡಬಹುದು ಎಂದು ಬೋಜೇಗೌಡ ಹೇಳಿದರು.

ABOUT THE AUTHOR

...view details