ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಕೆಂಬತ್ ಮಕ್ಕಿ ಎಂಬ ಗ್ರಾಮದ ರೈತ ರಾಜಣ್ಣ ಎಂಬುವವರಿಗೆ ಸೇರಿದ್ದ ಅಂದಾಜು 6 ಎಕರೆ ಬಾಳೆ ತೋಟ ಮಳೆಯಿಂದಾಗಿ ನಾಶವಾಗಿತ್ತು. ಈ ಕುರಿತು ಈ ಟಿವಿ ಭಾರತ ಸುದ್ದಿ ಪ್ರಕಟಿಸಿತ್ತು.
ತಕ್ಷಣವೇ ಜಿಲ್ಲಾಧಿಕಾರಿ ಬಗಾದಿ ಗೌತಮ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹೆಚ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳದಲ್ಲಿಯೇ 27 ಸಾವಿರ ರೂ. ಮೊತ್ತದ ಪರಿಹಾರದ ಚೆಕ್ ವಿತರಿಸಿದರು.
ಮಳೆಯಿಂದ ನಷ್ಟ ಹೊಂದಿದ ಬಾಳೆ ತೋಟದ ಮಾಲೀಕರಿಗೆ ಪರಿಹಾರ ವಿತರಣೆ 6 ಎಕರೆ ವಿಸ್ತೀರ್ಣದಲ್ಲಿ 9 ಸಾವಿರ ಬಾಳೆ ಗಿಡಗಳನ್ನು ರಾಜಣ್ಣ ಬೆಳೆಸಿದ್ದರು. ಧಾರಾಕಾರ ಮಳೆಗೆ ಬಾಳೆ ಗಿಡಗಳು ನೆಲಕಚ್ಚಿದ್ದವು. ಇದರಿಂದ ರೈತ ರಾಜಣ್ಣ ನಷ್ಟ ಅನುಭವಿಸಿದ್ದರು.
ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ ಹಾನಿಗೊಳಗಾದ ಜಾಗವನ್ನು ಎರಡು ಹೆಕ್ಟೇರ್ ವಿಸ್ತೀರ್ಣಕ್ಕೆ ಮಿತಿಗೊಳಿಸಿ 27 ಸಾವಿರ ರೂ. ಪರಿಹಾರದ ಚೆಕ್ ಸ್ಥಳದಲ್ಲಿಯೇ ರೈತ ರಾಜಣ್ಣನಿಗೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ವಿತರಣೆ ಮಾಡಿದ್ದಾರೆ.