ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶೃತಿ.. ಪ್ರವಾಹ ಸಂತ್ರಸ್ತರನ್ನ ತಲುಪಿದ ಪರಿಹಾರ ಸಾಮಗ್ರಿಗಳು..

ಈಟಿವಿ ಭಾರತದ ವರದಿಯಿಂದ ಎಚ್ಚೆತ್ತ ಚಿಕ್ಕಮಗಳೂರು ಜಿಲ್ಲಾಡಳಿತ ಗೋದಾಮಿನಲ್ಲಿ ಕೊಳೆಯುತ್ತಿದ್ದ ಪ್ರವಾಹ ಸಂತ್ರಸ್ತರಿಗಾಗಿ ಸಂಗ್ರಹಿಸಿಟ್ಟಿದ್ದ ದಿನಬಳಕೆ ವಸ್ತುಗಳನ್ನ ಕೊನೆಗೂ ಅರ್ಹರಿಗೆ ತಲುಪಿಸುವ ಕೆಲಸ ಮಾಡಿದೆ.

ಪ್ರವಾಹ ಸಂತ್ರಸ್ತರನ್ನ ತಲುಪಿದ ಪರಿಹಾರ ಸಾಮಾಗ್ರಿಗಳು

By

Published : Nov 16, 2019, 7:08 PM IST

ಚಿಕ್ಕಮಗಳೂರು: ಪ್ರವಾಹ ಸಂತ್ರಸ್ತರ ನೆರವಿಗಾಗಿ ನೀಡಿದ್ದ ಪರಿಹಾರ ಸಾಮಗ್ರಿಗಳು ವಾರ್ತಾ ಇಲಾಖೆ ಗೋದಾಮಿನಲ್ಲಿ ಕೊಳೆಯುತಿದ್ದ ಬಗ್ಗೆ ಈಟಿವಿ ಭಾರತ ವರದಿ ಮಾಡಿತ್ತು. ಇದೇ ವರದಿಯಿಂದ ಈಗ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.

ಪ್ರವಾಹ ಸಂತ್ರಸ್ತರನ್ನ ತಲುಪಿದ ಪರಿಹಾರ ಸಾಮಗ್ರಿಗಳು..

ಈ ವರ್ಷದಲ್ಲಿ ಸುರಿದ ಭಾರಿ ಮಳೆಗೆ ಮಲೆನಾಡಿನ ಜನರು ಬೆಚ್ಚಿ ಬಿದ್ದಿದ್ದರು. ಎಲ್ಲವನ್ನೂ ಕಳೆದುಕೊಂಡು ಜೀವ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲಿ ಊರು ತೊರೆದಿದ್ದರು. ಮಲೆನಾಡಿಗರ ನೋವಿಗೆ ಕರಗಿದ ಕನ್ನಡಿಗರ ಜೀವ ತಮ್ಮ ಕೈಲಾದ ಸಹಾಯ ಮಾಡಿದ್ದರು. ಆದರೆ, ರಾಜ್ಯದ ಮೂಲೆ-ಮೂಲೆಗಳಿಂದ ಬಂದ ನೆರವನ್ನು ಸಂತ್ರಸ್ತರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿತ್ತು.

ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಕಚೇರಿ ಪಕ್ಕದಲ್ಲೇ ಇರುವ ವಾರ್ತಾ ಇಲಾಖೆ ಗೋದಾಮಿನಲ್ಲಿ ರಾಶಿ-ರಾಶಿ ಪರಿಹಾರ ಸಾಮಗ್ರಿಗಳು ಹುಳು ತಿನ್ನುತ್ತಿದ್ದವು. ನಾಲ್ಕು ತಿಂಗಳಾಗಿದ್ದರೂ ನೆರವನ್ನು ನಿರಾಶ್ರಿತರಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದರು.

ಈ ಕುರಿತು ಈಟಿವಿ ಭಾರತ ಸುದ್ದಿ ಪ್ರಸಾರ ಮಾಡಿ, ಅಧಿಕಾರಿಗಳ ಕಣ್ಣು ತೆರೆಸುವ ಕೆಲಸ ಮಾಡಿತ್ತು. ಈ ಸುದ್ದಿ ಬಂದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ ವಾರ್ತಾ ಇಲಾಖೆಯ ಗೋದಾಮಿನಲ್ಲಿರಿಸಿದ್ದ ವಸ್ತುಗಳನ್ನು ಹೊರ ತೆಗೆದಿದೆ. ಎಲ್ಲಾ ವಸ್ತುಗಳನ್ನು ಲಾರಿಯಲ್ಲಿ ತುಂಬಿಸಿ ನಿರಾಶ್ರಿತರಿಗೆ ನೀಡುವ ಕೆಲಸಕ್ಕೆ ಕೈಹಾಕಿದೆ. ಈ ಮೂಲಕ ಈಟಿವಿ ಭಾರತ ವರದಿಯಿಂದ ಸಹೃದಯಿ ಕನ್ನಡಿಗರು ನೀಡಿದ್ದ ಪರಿಹಾರ ಸಾಮಗ್ರಿಗಳು ಪ್ರವಾಹ ಸಂತ್ರಸ್ತರಿಗೆ ತಲುಪಿವೆ.

ABOUT THE AUTHOR

...view details