ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿ ಹಾಗೂ ಲಾಕ್ಡೌನ್ನಿಂದ ಜಿಲ್ಲೆಯಲ್ಲಿ ಮಾನಸಿಕ ರೋಗಿಗಳಿಗೆ ಬೇಕಿರುವ ಔಷಧಗಳು ಸಿಗುತ್ತಿಲ್ಲ. ಆದರೇ ಶಿವಮೊಗ್ಗದಲ್ಲಿ ದೊರೆಯುತ್ತಿದ್ದು, ಈಗಾಗಲೇ ಶಿವಮೊಗ್ಗದಿಂದ ಅಗತ್ಯ ಔಷಧಗಳನ್ನು ರವಾನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಶಿವಾನಂದ್ ಹೇಳಿದ್ದಾರೆ.
ಚಿಕ್ಕಮಗಳೂರಿನ ಮಾನಸಿಕ ರೋಗಿಗಳಿಗೆ ಶಿವಮೊಗ್ಗದಿಂದ ಅಗತ್ಯ ಔಷಧ ರವಾನೆ - medical cell
ಲಾಕ್ಡೌನ್ ಜಾರಿಯಾದ ಬಳಿಕ ಹಲವೆಡೆ ಅಗತ್ಯ ಔಷಧಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಹಿನ್ನೆಲೆ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿರುವ ಮಾನಸಿಕ ರೋಗಿಗಳ ಔಷಧವನ್ನ ಶಿವಮೊಗ್ಗ ಹಾಗೂ ಬೆಂಗಳೂರಿನಿಂದಲೂ ತರಿಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಔಷಧ ಮಾರಾಟಗಾರರ ಸಂಘದ ಅಧ್ಯಕ್ಷ ಶಿವಾನಂದ್ ತಿಳಿಸಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಯಾವುದೇ ಔಷಧಿಯ ಕೊರತೆಯಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
![ಚಿಕ್ಕಮಗಳೂರಿನ ಮಾನಸಿಕ ರೋಗಿಗಳಿಗೆ ಶಿವಮೊಗ್ಗದಿಂದ ಅಗತ್ಯ ಔಷಧ ರವಾನೆ Essential drug delivery from Shimoga for psychiatric patients in Chikmagalur](https://etvbharatimages.akamaized.net/etvbharat/prod-images/768-512-6869197-648-6869197-1587384807728.jpg)
ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಮೆಡಿಕಲ್ ಸೆಲ್ ತೆರೆಯಲಾಗಿದ್ದು, ಈ ಮೂಲಕ ಅಗತ್ಯವಿರುವ ಔಷಧಗಳನ್ನು ತರಿಸಿಕೊಳ್ಳಲಾಗುತ್ತಿದೆ. ಪೊಲೀಸ್ ಮೆಡಿಕಲ್ ಸೆಲ್ ಮೂಲಕ ನನಗೆ ಔಷಧಗಳ ಲಿಸ್ಟ್ ಕಳುಹಿಸುತ್ತಾರೆ. ನಾನು ಅದನ್ನು ಮೆಡಿಕಲ್ ಸೆಲ್ಗೆ ತಂದುಕೊಡುತ್ತೇನೆ, ನಂತರ ಪೊಲೀಸರು ರೋಗಿಗಳಿಗೆ ಜಿಲ್ಲೆಯಲ್ಲಿ ವಿತರಣೆ ಮಾಡುತ್ತಿದ್ದಾರೆ ಎಂದಿದ್ದಾರೆ.
ಶಿವಮೊಗ್ಗಕ್ಕೆ ಖುದ್ದು ಹೋಗಿ ನಾನು ಔಷಧ ತರುತ್ತಿದ್ದು, ಕಳೆದ ಒಂದು ವಾರದಿಂದ ಈ ಕೆಲಸ ಮಾಡುತ್ತಿದ್ದೇವೆ. ಯಾವುದೇ ರೋಗಿಗಳಿಗೆ ತೊಂದರೆಯಾಗಿಲ್ಲ. ಜಿಲ್ಲಾ ಎಸ್ಪಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವೊಂದು ಔಷಧಗಳು ಬೆಂಗಳೂರಿನಿಂದ ತರಬೇಕಾಗಿದೆ. ಅಲ್ಲಿಯೂ ಲಾಕ್ಡೌನ್ ಆಗಿದೆ. ಅದರೂ ನಾವು ಅಲ್ಲಿಂದಲೂ ಔಷಧ ತರಿಸಿಕೊಡುತ್ತಿದ್ದು, ಮಾನಸಿಕ ರೋಗಿಗಳಿಗೆ ಯಾವುದೇ ರೀತಿಯಾ ತೊಂದರೆ ಆಗುತ್ತಿಲ್ಲ ಎಂದಿದ್ದಾರೆ.