ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಲೇ ಇದ್ದು, ಸಾರ್ವಜನಿಕರು ರಸ್ತೆಯಲ್ಲಿ ಸಂಚಾರ ಮಾಡೋದಕ್ಕೆ ಹೆದರುವಂತಹ ಪರಿಸ್ಥಿತಿ ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿದೆ.
ಮಲೆನಾಡಿನಲ್ಲಿ ಹೆಚ್ಚಿದ ಒಂಟಿ ಸಲಗದ ಹಾವಳಿ... ಮದಗಜದ ರಾಜಗಾಂಭಿರ್ಯಕ್ಕೆ ಬೆಚ್ಚಿದ ಜನತೆ - ಕಾಫೀ ತೋಟ
ಕಾಫೀ ತೋಟ, ಅಡಿಕೆ ತೋಟಗಳಿಗೆ ನುಗ್ಗುತ್ತಿದ್ದಂತಹ ಒಂಟಿ ಸಲಗ ಈಗ ನೇರವಾಗಿ ಮುಖ್ಯ ರಸ್ತೆಯಲ್ಲಿಯೇ ಸಂಚಾರ ಮಾಡುತ್ತಿರುವ ಘಟನೆ ಮಲೆನಾಡಿನಲ್ಲಿ ನಡೆದಿದೆ.
ಇಷ್ಟು ದಿನ ಕಾಫೀ ತೋಟ, ಅಡಿಕೆ ತೋಟಗಳಿಗೆ ನುಗ್ಗುತ್ತಿದ್ದಂತಹ ಕಾಡು ಪ್ರಾಣಿಗಳು ಈಗ ನೇರವಾಗಿ ಮುಖ್ಯ ರಸ್ತೆಯಲ್ಲಿಯೇ ಸಂಚಾರ ಮಾಡೋದಕ್ಕೆ ಪ್ರಾರಂಭ ಮಾಡಿವೆ. ಮೂಡಿಗೆರೆ ತಾಲೂಕಿನ ಬಿಳ್ಳೂರು, ಕೆಸವಳಲು ಗ್ರಾಮದ ಸುತ್ತ -ಮುತ್ತ ಬೃಹತ್ ಗಾತ್ರದ ಒಂಟಿ ಸಲಗ ಕಾಣಿಸಿಕೊಂಡಿದ್ದು, ರಾಜಾರೋಷವಾಗಿಯೇ ಊರಿನ ಮುಖ್ಯ ರಸ್ತೆಯಲ್ಲಿಯೇ ಸಂಚಾರ ಮಾಡುತ್ತಿದೆ.
ಗಜರಾಜನ ನಡಿಗೆ ನೋಡಿ ಸಾರ್ವಜನಿಕರು ಬೆಳ್ಳಂ ಬೆಳಗ್ಗೆಯೇ ಬೆಚ್ಚಿ ಬಿದ್ದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ಥಳೀಯರು ಕರೆ ಮಾಡಿದರೆ ಕರೆಯನ್ನು ಸ್ವೀಕರಿಸಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿಂದೆಯೂ ಕೂಡ ಆನೆಯ ಹಾವಳಿಯಿಂದ ಬೇಸತ್ತಿದ್ದು, ಇಲಾಖೆಗೆ ಎಷ್ಟೇ ದೂರು ನೀಡಿದರೂ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.