ಕರ್ನಾಟಕ

karnataka

ETV Bharat / state

ಬೈಕ್​ ಸವಾರನ ಬೆನ್ನತ್ತಿದ ಒಂಟಿ ಸಲಗ: ಗಾಯಾಳುಗೆ ಚಿಕಿತ್ಸೆ

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಬೈಕ್​ ಸವಾರನ ಮೇಲೆ ಒಂಟಿ ಸಲಗ ದಾಳಿ ಮಾಡಲು ಯತ್ನಿಸಿದೆ.

Elephant tried to attack on Bike rider in Chikkamagaluru ಬೈಕ್​ ಸವಾರನ ಮೇಲೆ ದಾಳಿಗೆ ಯತ್ನಿಸಿದ ಒಂಟಿ ಸಲಗ
ಬೈಕ್​ ಸವಾರನ ಮೇಲೆ ದಾಳಿಗೆ ಯತ್ನಿಸಿದ ಒಂಟಿ ಸಲಗ

By

Published : Mar 16, 2020, 5:27 PM IST

ಚಿಕ್ಕಮಗಳೂರು: ಬೈಕ್​ ಸವಾರನ ಮೇಲೆ ಒಂಟಿ ಸಲಗ ದಾಳಿ ಮಾಡಲು ಯತ್ನಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಜರುಗಿದೆ.

ಅವಿನಾಶ್ ಎಂಬ ವ್ಯಕ್ತಿ ಬೈಕ್​ ಮೇಲೆ ಮನೆಗೆ ಹೋಗುತ್ತಿದ್ದ ವೇಳೆ ಅಡ್ಡ ಬಂದ ಒಂಟಿ ಸಲಗ ದಾಳಿ ಮಾಡಲು ಪ್ರಯತ್ನ ಮಾಡಿದೆ. ತಕ್ಷಣ ಅವಿನಾಶ್​ ಬೈಕ್ ನಿಂದ ಹಾರಿ ತಪ್ಪಿಸಿಕೊಂಡಿದ್ದು, ಸಣ್ಣ ಪುಟ್ಟ ಗಾಯಾಗಳಾಗಿವೆ.

ಅವಿನಾಶ್​ಗೆ ಸ್ಥಳೀಯ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಕುಂಬರಡಿ ಗ್ರಾಮದ ಸುತ್ತ ಮುತ್ತಲಿನ ಪ್ರದೇಶದಲ್ಲಿಯೇ ಈ ಕಾಡಾನೆ ಬೀಡು ಬಿಟ್ಟಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕಾಡನೆಯನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details