ಚಿಕ್ಕಮಗಳೂರು :ಇಷ್ಟು ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ ಹಾಗೂ ಮಲೆನಾಡು ಭಾಗದ ಕಾಫಿ ತೋಟಗಳಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು ಈಗ ನಗರದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭ ಮಾಡಿವೆ.
ದಿ. ಸಿದ್ದಾರ್ಥ್ ಹೆಗಡೆ ಕಾಫಿ ಡೇ ಕಂಪನಿಯಲ್ಲಿ ಕಾಡಾನೆ ಪ್ರತ್ಯಕ್ಷ! - ದಿವಂಗತ ಸಿದ್ದಾರ್ಥ್ ಹೆಗಡೆ ಕಾಫಿ ಡೇ ಕಂಪನಿಯಲ್ಲಿ ಕಾಡಾನೆ ಪ್ರತ್ಯಕ್ಷ ಸುದ್ದಿ
ಕಾಡಾನೆ ಕಾಫೀ ಡೇ ಕಂಪನಿಯಲ್ಲಿ ಸುತ್ತು ಹಾಕಿದೆ. ಇದನ್ನು ಕಂಡು ಕೆಲಸ ಮಾಡುವ ಕಾರ್ಮಿಕರಲ್ಲಿಯೂ ಆತಂಕ ಮನೆ ಮಾಡಿದೆ..
![ದಿ. ಸಿದ್ದಾರ್ಥ್ ಹೆಗಡೆ ಕಾಫಿ ಡೇ ಕಂಪನಿಯಲ್ಲಿ ಕಾಡಾನೆ ಪ್ರತ್ಯಕ್ಷ! Elephant found, Elephant found in Late Siddharth Hegde Coffee Day Company, Chikkamagaluru news, ಕಾಡಾನೆ ಪ್ರತ್ಯಕ್ಷ, ದಿವಂಗತ ಸಿದ್ದಾರ್ಥ್ ಹೆಗಡೆ ಕಾಫಿ ಡೇ ಕಂಪನಿಯಲ್ಲಿ ಕಾಡಾನೆ ಪ್ರತ್ಯಕ್ಷ](https://etvbharatimages.akamaized.net/etvbharat/prod-images/768-512-12430907-859-12430907-1626079228193.jpg)
ಚಿಕ್ಕಮಗಳೂರು-ಮೂಡಿಗೆರೆಗೆ ಹೋಗುವ ರಸ್ತೆಯಲ್ಲಿರುವ ಕಾಫಿ ಸಾಮ್ರಾಟ್ ದಿ. ಸಿದ್ದಾರ್ಥ್ ಹೆಗಡೆ ಅವರ ಕಾಫಿ ಡೇ ಕಂಪನಿಯಲ್ಲಿ ಈ ಕಾಡಾನೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ನಗರದ ಮುಖ್ಯ ರಸ್ತೆಯಲ್ಲಿಯೇ ಈ ಕಾಡಾನೆ ಸಂಚಾರ ಮಾಡಿ, ಸಾರ್ವಜನಿಕರನ್ನು ಭಯಭೀತಗೊಳಿಸಿದ್ದು, ನಂತರ ರೋಡ್ ಕ್ರಾಸ್ ಮಾಡಿ ನೇರವಾಗಿ ಕಾಫಿ ಡೇ ಕಂಪನಿ ಒಳಗಡೆ ಪ್ರವೇಶ ಮಾಡಿದೆ.
ಕಾಡಾನೆ ಕಾಫೀ ಡೇ ಕಂಪನಿಯಲ್ಲಿ ಸುತ್ತು ಹಾಕಿದೆ. ಇದನ್ನು ಕಂಡು ಕೆಲಸ ಮಾಡುವ ಕಾರ್ಮಿಕರಲ್ಲಿಯೂ ಆತಂಕ ಮನೆ ಮಾಡಿದೆ. ಇಷ್ಟು ದಿನಗಳ ಕಾಲ ಕಾಫಿತೋಟ, ಕಾಡಂಚಿನ ಪ್ರದೇಶದಲ್ಲಿ ಕಾಣಿಸುತ್ತಿದ್ದ ಕಾಡಾನೆಗಳು ನಗರದಲ್ಲಿಯೇ ಕಾಣಿಸಿರುವುದು ಜನರನ್ನು ಭಯಭೀತಗೊಳಿಸುತ್ತಿದೆ.