ಚಾಮರಾಜನಗರ: ಆನೆಯೊಂದು ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಘಟನೆ ಹನೂರು ತಾಲೂಕಿನ ಹೂಗ್ಯಂ ಗ್ರಾ.ಪಂ. ವ್ಯಾಪ್ತಿಯ ಕೂಡಲೂರು ಸಮೀಪದ ಚನ್ನೇಗೌಡನದೊಡ್ಡಿಯಲ್ಲಿ ನಡೆದಿದೆ.
ಬಾವಿಗೆ ಬಿದ್ದು ಗಜರಾಜನ ನರಳಾಟ... ಮೇಲೆ ಬಂದಿದ್ದೇ ರೋಚಕ - ವಿಡಿಯೋ - elephant
ರಾತ್ರಿ ವೇಳೆ ಜಮೀನಿಗೆ ಲಗ್ಗೆಯಿಟ್ಟ ವೇಳೆ 30 ಅಡಿ ಆಳದ ಬಾವಿವೆ ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಜನರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಆಧಿಕಾರಿಗಳು ಜೆಸಿಬಿ ಬಳಸಿ ಆನೆಯನ್ನ ಮೇಲಕ್ಕೆತ್ತಿದ್ದಾರೆ.
![ಬಾವಿಗೆ ಬಿದ್ದು ಗಜರಾಜನ ನರಳಾಟ... ಮೇಲೆ ಬಂದಿದ್ದೇ ರೋಚಕ - ವಿಡಿಯೋ ಬಾವಿಗೆ ಬಿದ್ದು ಗಜರಾಜನ ನರಳಾಟ.](https://etvbharatimages.akamaized.net/etvbharat/prod-images/768-512-6906866-277-6906866-1587629669260.jpg)
ರಾತ್ರಿ ವೇಳೆ ಜಮೀನಿಗೆ ಲಗ್ಗೆಯಿಟ್ಟ ವೇಳೆ 30 ಅಡಿ ಆಳದ ಬಾವಿವೆ ಬಿದ್ದು ಒದ್ದಾಡುತ್ತಿದ್ದನ್ನು ಕಂಡ ಜನರು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಆರ್ಎಫ್ಒ ಸುಂದರ್ ಜೆಸಿಬಿ ಮೂಲಕ ಎರಡು ತಾಸು ಕಾರ್ಯಾಚರಣೆ ನಡೆಸಿ ಆನೆಯನ್ನು ಮೇಲಕ್ಕೆತ್ತಿದ್ದಾರೆ.
15-20 ವಯಸ್ಸಿನ ಗಂಡಾನೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಕಳೆದ 3-4 ದಿನಗಳಿಂದಲೂ ಆನೆ ಹಿಂಡು ಆಹಾರ ಅರಸಿ ಅಲೆದಾಡುತ್ತಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಮಾತ್ರ ಗ್ರಾಮಗಳತ್ತ ತಲೆ ಹಾಕಿಲ್ಲ ಎಂಬ ಆರೋಪ ಕೇಳಿಬಂದಿದೆ. ಹನೂರು ತಾಲೂಕಿನಲ್ಲಿ ಕಳೆದ 1 ತಿಂಗಳಲ್ಲಿ 7 ಆನೆ ಮೃತಪಟ್ಟಿದ್ದು ಕಳವಳಕಾರಿಯಾಗಿದೆ.