ಕರ್ನಾಟಕ

karnataka

ETV Bharat / state

ಕಾಡಾನೆಗಳ ದಾಳಿಗೆ ಬೇಸತ್ತ ರೈತರು: ಅರಣ್ಯ ಇಲಾಖೆ ನಿರ್ಲಕ್ಷ್ಯವೇಕೆ?

ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿ ಮುಂದುವೆರೆದಿದೆ. ಪ್ರತಿನಿತ್ಯ ದಾಳಿ ನಡೆಸುತ್ತಿರುವ ಪುಂಡ ಸಲಗಗಳು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಈ ಕುರಿತು ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

elephant-destroyed-crops-in-chikkamagalore
ಕಾಡಾನೆ ದಾಳಿ

By

Published : Jul 18, 2020, 8:44 PM IST

ಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ದಾಳಿ ಮುಂದುವರೆದಿದ್ದು, ಪ್ರತಿನಿತ್ಯ ರೈತರ ಬೆಳೆಗಳನ್ನು ನಾಶ ಮಾಡುತ್ತಿವೆ.

ಮೂಡಿಗೆರೆ ತಾಲೂಕಿನ ಕೆಂಜಿಗೆ, ಬಾಳೆಹಳ್ಳಿ, ಬಾನಳ್ಳಿ, ಬೆಳಗೋಡು, ಊರುಬಗೆ, ಗೌವನಹಳ್ಳಿ, ಕುಂಬಾರಡ್ಡಿ, ಕಿರುಗುಂದ ಆಲೇಖಾನ್ ಹೊರಟ್ಟಿ, ಭಾಗದಲ್ಲಿ 11 ಕಾಡಾನೆಗಳು ನಿರಂತರವಾಗಿ ದಾಳಿ ಮಾಡುತ್ತಿವೆ.

ಪುಂಡ ಆನೆಗಳ ದಾಳಿಗೆ ಬೇಸತ್ತ ರೈತರು

ಕಿರುಗುಂದ ಗ್ರಾಮದ ರೈತರ ಗದ್ದೆಗಳಿಗೆ ಕಾಡಾನೆಗಳು ನಿರಂತರ ದಾಳಿ ಮಾಡುತ್ತಿದ್ದು, ಏನೂ ಮಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ದಾಳಿ ಮಾಡುತ್ತಿರುವ ಕಾಡಾನೆಗಳು ರೈತರ ಬೆಳೆಗಳನ್ನು ಸರ್ವನಾಶ ಮಾಡಿ ಹೋಗುತ್ತಿವೆ.

ಈ ಕುರಿತು ರೈತರು ಹಾಗೂ ಸುತ್ತ ಮುತ್ತಲ ಪ್ರದೇಶದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗಾಲಾದರೂ ಈ ಕಾಡಾನೆಗಳನ್ನು ಕಾಡಿಗಟ್ಟಿ ರೈತರ ಬೆಳೆಗಳನ್ನು ಉಳಿಸಿ ಎಂದೂ ರೈತರು ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡುತ್ತಿದ್ದಾರೆ.

ABOUT THE AUTHOR

...view details