ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ಉಪಟಳ: ರೈತರ ಬೆಳೆ ನಾಶ ಮಾಡಿದ ಒಂಟಿ ಸಲಗ - ಬೆಳೆ ನಾಶ ಮಾಡಿದ ಕಾಡು ಆನೆ

ಮೂಡಿಗೆರೆ ತಾಲೂಕಿನ ಭೈರಾಪುರದ ಬಳಿ ಕಾಡಾನೆ ಕಾಟ ಹೆಚ್ಚಾಗಿದ್ದು, ರಸ್ತೆಯಲ್ಲಿ ಸಂಚರಿಸಲೂ ಸಹ ಜನ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ರೈತರ ಜಮೀನಿಗೆ ನುಗ್ಗಿದ ಒಂಟಿ ಸಲಗ ಬಾಳೆ, ಅಡಿಕೆ, ಕಾಫಿ ಬೆಳೆಯನ್ನು ನಾಶ ಮಾಡಿದೆ.

elephant-destroyed-crops-in-chikkamagalore
ಕಾಡಾನೆ

By

Published : Jul 10, 2020, 3:30 PM IST

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಭೈರಾಪುರದ ಬಳಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ರೈತರ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿದೆ.

ಕಾಫಿ ತೋಟಗಳಿಗೆ ನುಗ್ಗಿ ಆರ್ಭಟಿಸುತ್ತಿರುವ ಒಂಟಿ ಸಲಗವೊಂದು ಕಾಫಿ, ಅಡಿಕೆ, ಬಾಳೆಯನ್ನು ನಾಶ ಮಾಡುತ್ತಿದೆ. ಈ ಕುರಿತು ಸುತ್ತಮುತ್ತಲಿನ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತರ ಬೆಳೆ ನಾಶ ಮಾಡಿದ ಒಂಟಿ ಸಲಗ

ಸದ್ಯ ಭೈರಾಪುರದ ರಸ್ತೆಯ ಪಕ್ಕದ ಕೆಸರಿನಲ್ಲಿ ಈ ಕಾಡಾನೆ ಆಟವಾಡುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಪ್ರತಿನಿತ್ಯ ಈ ಭಾಗದಲ್ಲಿ ಈ ಸಲಗ ಕಾಣಿಸಿಕೊಳ್ಳುತ್ತಿದ್ದು, ರಸ್ತೆಯಲ್ಲಿ ಸಂಚರಿಸೋದಕ್ಕೂ ಜನರು ಭಯ ಪಡುತ್ತಿದ್ದಾರೆ. ಈಗಾಗಲಾದರೂ ಅರಣ್ಯ ಇಲಾಖೆ ರೈತರ ಮನವಿಗೆ ಸ್ಪಂದಿಸಬೇಕಿದೆ.

ABOUT THE AUTHOR

...view details